ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಆಯುಕ್ತ ಬಿ.ಸಿ.ಬಸವರಾಜ್ ಹಾಜರಿದ್ದರು. 
ಜಿಲ್ಲೆ

ಎರಡು ವಿಷಯದ ಚರ್ಚೆಗೇ ಮುಕ್ತಾಯಗೊಂಡ ಸಭೆ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ನಗರಸಭೆಯ ಸಾಮಾನ್ಯ ಸಭೆ ಆರಂಭವಾಗಿ ಕೆಲವೇ ನಿಮಿಷಗಳಾಗಿತ್ತು. ೬೮ ವಿಷಯಗಳ ಪೈಕಿ ಕೇವಲ ೨ ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆದಿತ್ತು. ಈ ವೇಳೆ ನಗರಸಭೆಯ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಆರಂಭಿಸಿದರು. ಆಗ ನಗರಸಭೆ ಅಧ್ಯಕ್ಷರು ಇಂದಿನ ಸಭೆಯಲ್ಲಿ ಎಲ್ಲ ೬೮ ವಿಷಯಗಳಿಗೂ ಅನುಮೋದನೆ ಸಿಕ್ಕಿದೆ ಎಂದು ಘೊಷಣೆ ಮಾಡಿ ಸಭೆ ಮುಕ್ತಾಯಗೊಳಿಸಿ ಹೊರನಡೆದ ವಿಲಕ್ಷಣ ಘಟನೆಗೆ ಚಿಕ್ಕಮಗಳೂರು ನಗರಸಭೆ ಸಾಕ್ಷಿಯಾಯಿತು.

ಹೌದು. ಇಂದು ನಗರಸಭೆ ಸಭಾಂಗಣದಲ್ಲಿ ನಗರಸಭೆಯ ಸಾಮಾನ್ಯ ಸಭೆ ಆರಂಭಗೊAಡ ಅರ್ಧ ಗಂಟೆ ಒಳಗಾಗಿ ಸಭೆಯೇ ಮುಕ್ತಾಯಗೊಂಡಿದ್ದಲ್ಲದೆ, ಪ್ರತಿಭಟನೆ ಹಾಗೂ ಹೈಡ್ರಾಮಾಕ್ಕೂ ಸಾಕ್ಷಿಯಾಯಿತು.
ಸಭೆಯಲ್ಲಿ ಎರಡು ವಿಷಯಗಳು ಚರ್ಚೆಯಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಕುಮಾರ್ ಗೌಡ ಅವರು, ಇಂದಿನ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುವ ಎಲ್ಲ ವಿಷಯಗಳಿಗೂ ನಮ್ಮ ವಿರೋಧವಿದೆ. ಅನುಮೋದನೆ ಪಡೆಯಲು ಬಹುಮತ ಸಾಬೀತುಪಡಿಸಿ ಎಂದು ನಗರಸಭೆ ಅಧ್ಯಕ್ಷರನ್ನು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರೂ ಧ್ವನಿಗೂಡಿಸುತ್ತಿದ್ದಂತೆ ಅಧ್ಯಕ್ಷರು ಎಲ್ಲ ವಿಷಯಗಳಿಗೂ ಅನುಮೋದನೆ ಸಿಕ್ಕಿದೆ ಎಂದು ಹೇಳಿ ಸಭೆಯನ್ನೇ ಮುಕ್ತಾಯಗೊಳಿಸಿದ್ದು ವಿಶೇಷವಾಗಿತ್ತು.
ನಗರಸಭೆ ಅಧ್ಯಕ್ಷರು ಸಭೆ ಆರಂಭಗೊಳ್ಳುತ್ತಿದ್ದAತೆ ಮುಕ್ತಾಯಗೊಳಿಸಿದ್ದರಿಂದ ಕೆಂಡಾಮAಡಲರಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಗರಸಭೆ ಸಭಾಂಗಣದಲ್ಲೇ ಕುಳಿತು ಪ್ರತಿಭಟನೆ ನಡೆಸಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಕಳೆದ ಕೆಲ ಸಭೆಗಳಲ್ಲಿ ಈ ರೀತಿಯ ಪ್ರತಿಭಟನೆ ಹಾಗೂ ಹೈಡ್ರಾಮಾ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಸಭೆಯ ಆರಂಭದಲ್ಲಿ ನಗರದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ ನಗರಸಭೆ ಅಧಿಕಾರಿ ವೆಂಕಟೇಶ್ ಅವರು ನಮ್ಮ ಜಿಲ್ಲೆ ಡೆಂಘೆಯಲ್ಲಿ ಎರಡನೆ ಸ್ಥಾನ ಪಡೆದಿದೆ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಇದರಿಂದ ಅಸಮಾಧಾನಗೊಂಡ ಸದಸ್ಯ ಟಿ.ರಾಜಶೇಖರ, ಜಿಲ್ಲೆ ಮತ್ತು ನಗರದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗಿವೆ. ಡೆಂಘೆ ನಿಯಂತ್ರಣಕ್ಕೆ ಸಂಬAಧಿಸಿದAತೆ ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಆದರೆ ಡೆಂಘೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಡೆಂಘೆ ನಿಯಂತ್ರಣ ಸಂಬAಧ ಎಷ್ಟು ಸಭೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾತನಾಡಿ, ಜೂನ್ ತಿಂಗಳಿನಿAದ ಜುಲೈ ೧೦ ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ೪೮ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಹೌಸಿಂಗ್ ಬೋರ್ಡ್ನಲ್ಲಿ ೭, ಕಲ್ಯಾಣ ನಗರದಲ್ಲಿ ೪, ವಿಜಯಪುರ ೩, ದಂಟರಮಕ್ಕಿ ೭, ಜ್ಯೋತಿನಗರ ೩, ಬಸವನಹಳ್ಳಿ ೧, ಗೌರಿಕಾಲುವೆ ೨, ನುರಾನಿ ಮಸೀದಿ ೨, ಹಿರೇಮಗಳೂರು ೪, ದೋಣಿಕಣ ೬, ಜಯನಗರ ೧, ಕ್ರಿಶ್ಚಿಯನ್ ಕಾಲನಿ ೪, ಶಂಕರಪುರ ೨, ಶಾಂತಿನಗರ ೨ ಒಟ್ಟು ೪೮ ಪ್ರಕರಣಗಳು ದೃಢಪಟ್ಟಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ನಗರಸಭೆ ಆಯುಕ್ತ ಬಿ.ಸಿ ಬಸವರಾಜು ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ೫ ಸಭೆಯನ್ನು ಡೆಂಘೆ ಜಾಗೃತಿ ಬಗ್ಗೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಗಂಟೆ ಗಾಡಿಗಳು ೪ ದಿನವಾದರೂ ಕಸ ಸಂಗ್ರಹಿಸಲು ಬರುತ್ತಿಲ್ಲ, ಇದರಿಂದಲೇ ಡೆಂಗ್ಯೂ ಹೆಚ್ಚಳವಾಗಿದೆ ಎಂದು ಸದಸ್ಯರಾದ ಶಾದಬ್ ಆಲಂ ಖಾನ್, ಲಕ್ಷö್ಮಣ ದೂರಿದರು.
ಕಸದ ಗಂಟೆ ಗಾಡಿಯವರು ಸರಿಯಾಗಿ ನಿರ್ವಹಣೆಮಾಡುತ್ತಿಲ್ಲ ಎಂದಾದಲ್ಲಿ ಅವರನ್ನು ಬದಲಾಯಿಸಿ ಬೇರೆಯವರಿಗೆ ಟೆಂಡರ್ ಕೊಡಿ ಅಥವಾ ನಗರಸಭೆಯವರೇ ನಿರ್ವಹಣೆ ಮಾಡಿ ಎಂದು ಟಿ.ರಾಜಶೇಖರ್ ಸಲಹೆ ನೀಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಒಮ್ಮತದಿಂದ ಈ ಬಗ್ಗೆ ಶೀಘ್ರ ಪರ್ಯಾಯ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದರು.
ಈ ಚರ್ಚೆ ಮುಗಿದ ಬೆನ್ನಲ್ಲೇ ಸಭೆಯಲ್ಲಿ ಗೊಂದಲ ನಿರ್ಮಾಣವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನನಗೆ ೨೪ ತಿಂಗಳಿAದ ನಗರಸಭೆ ಅಧ್ಯಕ್ಷನಾಗಿ ಆಡಳಿತ ನಡೆಸಲು ಎಲ್ಲ ಸದಸ್ಯರು, ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಕೂಡ ಸಹಕರಿಸಿದ್ದಾರೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಸಭೆಯನ್ನೇ ಮುಕ್ತಾಯಗೊಳಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.