ವಿಜಯಪುರ: ವೈದ್ಯ ವೃತ್ತಿ ಕೇವಲ ವೃತ್ತಿಯಾಗಿರದೇ ಮಾನವ ಕುಲದ ಸೇವೆಯಾಗಿದೆ. ವೈದ್ಯರು ಸಹಾನುಭೂತಿಯ ಸಂಕೇತವಾಗಿದ್ದು, ಜನರ ಜೀವನವನ್ನು ವೈದ್ಯರಿಗೆ ವಹಿಸಲಾಗಿದೆ. ಹೀಗಾಗಿ ವೈದ್ಯರು ಬಹಳ ಜಾಗರೂಕರಾಗಿರಬೇಕು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಸಿಕ್ಯಾಬ್ ಸಂಸ್ಥೆಯ ಲೂಕ್ಮಾನ್ ಯುನಾನಿ ವೈದ್ಯಕಿಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಬಿಯುಎಂಎಸ್ಎಂಡಿಎಂಎಸ್ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡ ಪದವಿ ದಿನ (ಗ್ರಾಜುಯೇಷನ್ ಡೇ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಸಲಾವುದ್ಧಿನ್ ಪುಣೇಕರ್ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿ, ವೈದ್ಯ ವಿದ್ಯಾರ್ಥಿಗಳು ನೀವು ಸಮಾಜಕ್ಕೆ ಹಾಗೂ ಜಗತ್ತಿಗೆ ನಿಮ್ಮ ಕೊಡುಗೆ ನೀಡುವ ಮೂಲಕ ಉತ್ತಮ ಸಲ್ಲಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಶೈನಾಜ್ ವಾರ್ಷಿಕ ವರದಿ ವಾಚಿಸಿದರು. ಸಲ್ಮಾ ಚಾವೂಶ್ ಸ್ವಾಗತಿಸಿದರು. ಡಾ. ನೂಜಹತ್ ಪಟೇಲ್ ನಿರೂಪಿಸಿದರು. ಡಾ. ನಿಖತ್ ಇನಾಮಾದಾರ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಸೈಯದ್ ವಾಜಿದ ಪೀರಜಾದೆ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಸಿ.ಎಸ್. ನಿಂಬಾಳ, ಜಿ.ಎ. ಅತನೂರ, ನಜೀಬ್ ಭ, ಡೀನ್ ಡಾ. ಅಖಿಲ್ ಖಾದರಿ, ಉಪ ಪ್ರಾಚಾರ್ಯ ಡಾ. ತಸ್ಮಿಯಾ, ವಿದ್ಯಾರ್ಥಿಗಳು ಮತ್ತಿತರರಿದ್ದರು.