ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಲಕ್ಷ್ಮೀ ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್ ರಾಮಪ್ಪ ಬಡಿಗೇರ, ನಿವಾಸಿಗಳ ಕುಂದು-ಕೊರತೆಗಳ ಮಾಹಿತಿ ಪಡೆದರು.
ಲಕ್ಷ್ಮೀ ನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅರುಣ ಅಂಗಡಿ ಮಾತನಾಡಿ, ನಗರದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ, ವಾಕಿಂಗ್ ಪಾತ್, ಸುಂದರ ಉದ್ಯಾನವನ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ರಾಮಪ್ಪ ಬಡಿಗೇರ ಮಾತನಾಡಿ, ನಗರಕ್ಕೆ ಅಗತ್ಯವಾಗಿರುವ ಎಲ್ಲ ಬೇಡಿಕೆಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಸಂಜಯ ಕಪಟಕರ ಮಾತನಾಡಿ, ಈ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ, ಪಾಲಿಕೆ ಮಾಜಿ ಸದಸ್ಯ ಬಸವರಾಜ ಮುತ್ತಳ್ಳಿ, ನಿವಾಸಿಗಳಾದ ಲಿಂಗರಾಜ ಬೈಲಗಾಣದ, ಡಾ. ಎಂ.ವೈ. ಸಾವಂತ, ಅಶೋಕ ಅವಲಕ್ಕಿ, ಗಣೇಶ ಜೋಶಿ, ಎಸ್.ಆರ್. ಗಂಗಾ, ರಾಜಶೇಖರ ಕಲ್ಮಂಗಿ, ಮಂಜುನಾಥ, ಇತರರು ಇದ್ದರು.
ಬಸವರಾಜ ತಾಳಿಕೋಟಿ ಸ್ವಾಗತಿಸಿದರು. ಉದಯ ಗಿರಿಯಮ್ಮನವರ ವಂದಿಸಿದರು.