ಜಿಲ್ಲೆ

ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ ವಸ್ತು ವಶ

reportermys

ಮಡಿಕೇರಿ: ಹೇಮಾವತಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ ಯಾಂತ್ರಿಕ ಬೋಟ್ ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡ್ಲಿಪೇಟೆಯ ಚಿಕ್ಕಕೊಡ್ಲಿ ಎಂಬ ಸ್ಥಳದಲ್ಲಿ ಯಾಂತ್ರಿಕ ಬೋಟ್ ಬಳಸಿಕೊಂಡು ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಅಪರಾಧ ಪತ್ತೆ ಧಳದ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ, ಡಿಸಿಐಬಿ ತಂಡ ದಾಳಿ ಮಾಡಿ ಎರಡು ಟ್ರ್ಯಾಕ್ಟರ್, ೧ ಬೋಟ್, ೧ ದೊಡ್ಡ ಮೋಟಾರ್, ಮರಳು ತೆಗೆಯಲು ಬಳಸುವ ಪೈಪ್‌ಗಳು ಹಾಗೂ ಬೋಟ್ ಬಳಸಿ ತೆಗೆದ ಮರಳು ಸೇರಿದಂತೆ ಒಟ್ಟು ಸುಮಾರು ೨೦ ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ವಶ ಪಡಿಸಿಕೊಂಡ ಸ್ವತನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರ್ಗಯಿಸಲಾಯಿತು.