ರಾಯಚೂರು ನಗರದ ಮಾವಿನ ಕೆರೆ ಬಳಿ ನಡೆಯುತ್ತಿರುವ ತರಕಾರಿ ಮಾರುಕಟ್ಟೆ ಅನಽಕೃತವಲ್ಲ. ೨೦೨೨ ಅಕ್ಬೊಬರ್ ೧೫ ರಂದು ನಡೆದ ನಗರಸಭೆ ಸಾಮಾನ್ಯ ಮಹಾಸಭೆಯಲ್ಲಿ ಲಲಿತಾ ಕಡಗೋಲ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅನುಮೋದನೆ ನೀಡಿ ಟೆಂಡರ್ ಅಂಗೀಕಾರಗೊಳಿಸಲಾಗಿದೆAದು ಎಂ.ಈರಣ್ಣನವರ ತರಕಾರಿ ಮಾರಾಟಗಾರರ ಹಾಗೂ ರೈತ ಉತ್ಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹ್ಮದ ವಸೀಂ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಮತ್ತು ತರಕಾರಿ ಮಾರಾಟಗಾರರಿಗೆ ಅನುಕೂಲವಾಗಲು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ೯.೫೦ ಲಕ್ಷ ರೂ. ಮುಂಗಡ ಠೇವಣಿ ಪಡೆದು ಕರವಸೂಲಿಗೆ ಅವಕಾಶ ನೀಡಲಾಗಿದೆ. ಮಾರುಕಟ್ಟೆ ಕರ ವಸೂಲಿಯಾಗುತ್ತಿದ್ದು ನಗರಸಭೆ ಪಾವತಿಯಾಗುತ್ತಿದೆ. ೪ರಿಂದ ೫ ನೂರು ಕುಟುಂಬಗಳು ಮಾರುಕಟ್ಟೆ ಅವಲಂಬಿಸಿ ಜೀವನ ಸಾಗಿಸುತ್ತಿವೆ. ನಗರಸಭೆಯೇ ಅನುಮೋದನೆ ನೀಡಿದ್ದು, ಅದರೆ ಎನ್.ಮಹಾವೀರ ಇವರು ಅನಽಕೃತ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ಅನಽಕೃತವಾಗಿದ್ದ ಸ್ಥಳಾಂತರಿಸಬೇಕೆAದು ಆಗ್ರಹಿಸುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದರು.
ತರಕಾರಿ ಮಾರಾಟಗಾರರ ಹಿತ ಕಾಯಬೇಕಿದ್ದ ಮಾಹಾವೀರರು ಅನಽಕೃತ ಮಾರಾಟ ಎಂದು ಆರೋಪಿಸುತ್ತಿದ್ದಾರೆ. ಮಹಾನಗರ ಪಾಲಿಕೆ ತರಕಾರಿ ಮಾರಾಟವನ್ನು ಸ್ಥಳಾಂತರಿಸದೇ ಅಲ್ಲಿಯೇ ಮುಂದುವರೆಸಬೇಕು. ನೂರಾರು ಕುಟುಂಬಗಳಿಗೆ ಆಸರೆಯಾಗಿ ಸಾರ್ವಜನಿಕರಿಗೆ ಹತ್ತಿರ ತರಕಾರಿ ದೊರೆಯುವಂತೆ ಕ್ರಮವಹಿಸಬೇಕೆಂದರು.
ಈ ಸಂದರ್ಭದಲ್ಲಿ ರಘುಬಾಬು, ಮೋನು, ಉಮೇಶ ಇದ್ದರು.