ಬೆಳಗಾವಿ: ಮಟಕಾ ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸಮೀಪದ ಬಡಸ್ ಕೆಎಚ್ ಗ್ರಾಮದ ಬಳಿ ಗುರುವಾರ ನಡೆದಿದೆ.
ಬಡಸ್ ಕೆಎಚ್ ಗ್ರಾಮದ ಪರುಶುರಾಮ ಅರ್ಜುನ ಸುತಾರ (39) ಬಂಧಿತ ಆರೋಪಿ. ಗಜಪತಿ- ಕುಕಡೊಳ್ಳಿ ರಸ್ತೆಯ ಪಶು ಆಸ್ಪತ್ರೆ ಬಳಿ ಓಸಿ ಚೀಟಿ ಬರೆಯುತ್ತಿರುವಾಗ ಪೊಲೀಸರು ದಾಳಿ ನಡೆಸಿ ಬಂಧಿಸಿ, 3 ಓಸಿ ಚೀಟಿ, ₹ 500 ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.