ಸರಗೂರು: ಪಟ್ಟಣದ 9ನೇ ವಾರ್ಡಿನ ವ್ಯಾಪ್ತಿಯ ಮಹಾವೀರ ಸರ್ಕಲ್ ಬಳಿ ಇರುವ ವಿನಾಯಕ ಮೆಡಿಕಲ್ ಸ್ಟೋರ್‌ನಲ್ಲಿ ಶನಿವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು 24 ಗಂಟೆ ಒಳಗೆ ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ನಿವಾಸಿ ಎಸ್.ಎಸ್.ಮಹೇಶ್ ಬಂಧಿತ. ಈತ ಶನಿವಾರ ರಾತ್ರಿ ಮೆಡಿಕಲ್ ಸ್ಟೋರ್‌ಗೆ ನುಗ್ಗಿ ಗಲ್ಲದಲ್ಲಿ ಇರಿಸಿದ್ದ 2 ಸಾವಿರ ರೂ. ನಗದು ಹಾಗೂ 8 ಸಾವಿರ ರೂ. ಚಿಲ್ಲರೆ ಹಣವನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮೆಡಿಕಲ್ ಸ್ಟೋರ್‌ನ ಮಾಲೀಕ ಯಾದವ್ ಅವರು ಭಾನುವಾರ ಸಂಜೆ ಠಾಣೆಗೆ ದೂರು ನೀಡಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಅವರ ನಿರ್ದೇಶನದಂತೆ ಎಸ್‌ಐ ಮಧು ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.