ಜಿಲ್ಲೆ

ಸತ್ಯವನ್ನು ಶೋಧಿಸುವುದೇ ಸಂಶೋಧನೆ ಮುಖ್ಯ ಗುರಿ

ಮೈಸೂರು: ಸತ್ಯವನ್ನು ಶೋಧಿಸುವುದೇ ಸಂಶೋಧನೆ ಮುಖ್ಯ ಗುರಿಯಾಗಿರಬೇಕು. ಪ್ರಶ್ನೆಗಳಿಗೆ ಉತ್ತರವನ್ನು ಮತ್ತು ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಸಂಶೋಧನೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಜಿ.ಆರ್.ಜನಾರ್ಧನ ಅಭಿಪ್ರಾಯಪಟ್ಟರು.

ನಗರದ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಶೋಧನಾ ವಿಧಾನದಲ್ಲಿ ಇತ್ತೀಚಿನ ವಿಧಾನಗಳು ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿಜ್ಞಾನ ವಿಷಯಗಳಲ್ಲಿ ಮಾತ್ರವಲ್ಲದೇ ಮಾನವಿಕ, ವ್ಯವಹಾರಿಕ ಅಧ್ಯಯನ ವಿಷಯಗಳ ಸಂಶೋಧನೆಯೇ ಮುಖ್ಯವೆನಿಸಿದ್ದು, ವಿಜ್ಞಾನಿಗಳು, ವೈದ್ಯಕೀಯ ಸಂಶೋಧಕರು, ಮಾನವಿಕ ವಿಷಯಗಳ ಸಂಶೋಧಕರು ತಮ್ಮ ಸಂಶೋಧನೆ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.