ಹಂಪಾಪುರ: ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿಯ ಹೊಮ್ಮರಗಳ್ಳಿ ಗ್ರಾಮಪಂಚಾಯಿತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಘಟಕ 2.0 ಜಲಾನಯನ ಯಾತ್ರೆ ರಥೋತ್ಸವವನ್ನು ಸರ್ಕಾರಿ ಶಾಲೆ ಆವರಣದವರೆಗೆ ವೀರಗಾಸೆ, ಡೊಳ್ಳು ವಾದ್ಯದೊಂದಿಗೆ ರೈತ ಮಹಿಳೆಯರಿಂದ ಕಳಸ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ನಂತರ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವೇದಿಕೆಯಲ್ಲಿ ಪ್ರಾರ್ಥನೆ, ನಾಡಗೀತೆ, ರೈತ ಗೀತೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಜಲಾನಯನ ಸಾಧಕರಿಗೆ ಹಾಗೂ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಗುಜ್ಜಪ್ಪನ ಹುಂಡಿ ಗ್ರಾಮದ ಶಾಲೆ ಆವರಣದಲ್ಲಿ ಶ್ರಮದಾನ ಮತ್ತು ಗಿಡ ನೆಡಲಾಯಿತು. ಕೃಷಿ ಅಧಿಕಾರಿ ಸಿದ್ದಪ್ಪ ಸ್ವಾಮಿ, ಸುವರ್ಣಮ್ಮ, ಹೊಮ್ಮರಗಳ್ಳಿ ಅಲುಮೇಲಮ್ಮ, ಕೃಷಿ ಉಪನಿರ್ದೇಶಕ ರಾಜು ಹುಣಸೂರು, ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ, ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ ರಾಜೇಶ್, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಮಹೇಶ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ಬಚ್ಚನ್ ಬೋರೇಗೌಡ, ಸಿದ್ದರಾಜು, ಸೋಮೇಶ್, ರಾಜನಾಯಕ ಇತರರಿದ್ದರು.