ಇಳಕಲ್ಲದ ದರ್ಗಾ ಸಮೀಪದ ಪ್ಲೇಓವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಉರುಳಿಬಿದ್ದಿರುವುದು. 
ಜಿಲ್ಲೆ

ಡಿವೈಡರ್‌ಗೆ ಡಿಕ್ಕಿ ಹೊಡೆದ ಲಾರಿ

Vijayapura - Desk - Gurappa Lokuri

ಇಳಕಲ್ಲ(ಗ್ರಾ): ಇಲ್ಲಿನ ದರ್ಗಾ ಸಮೀಪದ ಪ್ಲೇ ಓವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಹೊಸಪೇಟೆಯಿಂದ ರಾಜಸ್ಥಾನ ಕಡೆಗೆ ಸಾಗುತ್ತಿದ್ದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿಯಲ್ಲಿದ್ದ ಕುಂಬಳಕಾಯಿಗಳು ರಸ್ತೆ ತುಂಬ ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.

ಸ್ಥಳಕ್ಕೆ ಇಳಕಲ್ಲ ಶಹರ್ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಆರ್. ನಾಯಕ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಚಾರ ಅಸ್ತವ್ಯಸ್ತ ಹೆದ್ದಾರಿಯಲ್ಲಿ ಲಾರಿ ಅಡ್ಡಲಾಗಿ ಬಿದ್ದಿದ್ದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ವಾಹನಗಳು ಕೆಳಗಡೆ ರಸ್ತೆ ಮೂಲಕ ಸಂಚರಿಸುತ್ತಿರುವುದು ಕಂಡು ಬಂದಿತು. 5 ಗಂಟೆಗಳ ಬಳಿಕ ಲಾರಿ ತೆರವುಗೊಳಿಸಲಾಯಿತು.