ಮೈಸೂರು: ಲಾಲ್ ಬಹದ್ದೂರ್ ಶಾಸತ್ತ್ರಿನಗರದ ಎಲ್.ಶಾಂತರಾಜು ಅವರ ಮನೆಯ ಡೋರ್‌ಲಾಕ್ ಮುರಿದು ಒಳ ನುಗ್ಗಿದ ಕಳ್ಳರು, 4.5 ಲಕ್ಷ ರೂ.ವೌಲ್ಯದ ನಗದು, ಚಿನ್ನಾಭರಣ ದೋಚಿದ್ದಾರೆ.
ಶಾಂತರಾಜು ಅವರು ಸೆ.10ರಂದು ಬೆಳಗ್ಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಸಲು ಹೊರಗೆ ಹೋಗಿ ಮದ್ಯಾಹ್ನ 2 ಗಂಟೆ ವೇಳೆಗೆ ವಾಪಸ್ ಬಂದಿದ್ದಾರೆ. ಈ ಮನೆಯ ಮುಂಬಾಗಿಲಿನ ಲಾಕ್ ಒಡೆದಿರುವುದು ಕಳ್ಳತನ ಮಾಡಿರುವುದು ಕಂಡುಬಂದಿದೆ.
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.