ಜಿಲ್ಲೆ

ಕಂಬದಲ್ಲೇ ಲೈನ್‌ಮನ್ ಸಾವು

ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮೊದಲನೇ ಕ್ರಾಸ್‌ನಲ್ಲಿ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಕಂಬದಲ್ಲೇ ಮೃತಪಟ್ಟಿದ್ದಾನೆ. ಚನ್ನಗಿರಿ ತಾಲೂಕು ನಲ್ಲೂರಿನ ಕಿರಣ್(25) ಮೃತ ದುರ್ದೈವಿ. ಮತ್ತೊಬ್ಬ ಲೈನ್‌ಮನ್ ಸುನೀಲ್ ಎಂಬುವರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಗ್ಗೆ ನಿರ್ವಹಣೆ ಸಂಬಂಧ ಲೈನ್ ಆಫ್ ಮಾಡಿ ಅರ್ಥಿಂಗ್ ಮಾಡಿ ಕೆಲಸ ಮಾಡಲಾಗುತ್ತಿತ್ತು. 10.30ರ ವೇಳೆಗೆ ಜನರೇಟರ್‌ನಿಂದ ಹಿಮ್ಮುಖವಾಗಿ ವಿದ್ಯುತ್ ಪ್ರವಹಿಸಿ ಕಿರಣ್ ಕಂಬದಲ್ಲೆ ಮೃತಪಟ್ಟಿದ್ದಾರೆ. ಶಾಕ್ ಹೊಡೆದು ಸುನೀಲ್ ಕೆಳಗೆ ಬಿದ್ದಿದ್ದಾರೆ. ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕಂಡು ಲೈನ್‌ಮನ್‌ಗಳು ಆಘಾತಕ್ಕೆ ಒಳಗಾಗಿದ್ದಾರೆ. ಕಿರಣ್ ಸಹೋದರ ಕೂಡ ಮೆಸ್ಕಾಂ ಉದ್ಯೋಗಿಯಾಗಿದ್ದು ಚನ್ನಗಿರಿ ತಾಲೂಕಿನ ನುಗ್ಗೇಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.