ಬಿಡದಿ: ಶಾಸಕ ಬಾಲಕೃಷ್ಣ ಅವರ ಆದೇಶದಂತೆ ಫುಟ್ ಪಾತ್ ತೆರವು ಮಾಡಿ ಬಡ ವ್ಯಾಪಾರಿಗಳ ಜೀವನವನ್ನ ಬೀದಿಗೆ ತರಲಾಗಿದೆ. ಈ ವಿಚಾರವನ್ನ ನಾನು ಯಾವುದೇ ಕಾರಣಕ್ಕೂ ಸಹಿಸಲ್ಲ ನೊಂದ ವ್ಯಾಪಾರಿಗಳ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.
ಪಟ್ಟಣದ ಹಲವು ರಸ್ತೆಗಳಲ್ಲಿ ತೆರವು ಗೊಳಿಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೊಂದವರ ಜೊತೆಗೆ ಮಾತನಾಡಿದರು. ಬಡವರು ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡದೆ ಮಾಲ್‌ನಲ್ಲಿ ವ್ಯಾಪಾರ ಮಾಡಲು ಆಗುತ್ತದ. ಇದನ್ನು ಮೊದಲು ನಮ್ಮ ಶ್ರೀಮಂತ ರಾಜಕಾರಣಿಗಳು ಅರ್ಥಮಾಡಿಕೊಳ್ಳ ಬೇಕು ಎಂದು ಶಾಸಕ ಬಾಲಕೃಷ್ಣಗೆ ಟಾಂಗ್ ನೀಡಿದರು.
ಬಡವರಿಂದ ವ್ಯಾಪಾರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹತ್ತಾರು ವರ್ಷಗಳಿಂದ ಹಲವು ಮಂದಿ ಬಡವರು ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಫುಟ್‌ಪಾತ್ ವ್ಯಾಪಾರದಿಂದ ಸಾರ್ವಜನಿಕರಿಗೂ ಅನುಕೂಲವಾಗುತಿತ್ತು. ಫುಟ್‌ಪಾತ್ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸಬಾರದೆಂಬ ಸುಪ್ರೀಂ ಕೋರ್ಟ್ ಆದೇಶ ಇದೆ. ಆದರೆ ಶಾಸಕರು ಹಾಗೂ ಬಿಡದಿ ಪುರಸಭೆ ಅಧಿಕಾರಿಗಳು ಆದೇಶವನ್ನ ಗಾಳಿಗೆ ತೂರಿ ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದರು.
ಪರ್ಯಾಯ ಜಾಗ ನೀಡಿಲ್ಲ: ಪಟ್ಟಣದಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ ಹಾಗಾಇ ಫುಟ್‌ಪಾತ್ ತೆರವು ಗೊಳಿಸಲೆ ಬೇಕಾದಲ್ಲಿ ಮೊದಲು ಬೀದಿಬದಿ ವ್ಯಾಪಾರ ಮಾಡುವವರ ಸಭೆ ಕರೆದು ಅವರ ಕಷ್ಟ ಸುಖ ಆಲಿಸಿ, ರಸ್ತೆಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿ ಎಂದು ತಿಳಿ ಹೇಳಬೇಕಿತ್ತು. ತೆರವು ಗೊಳಿಸುವುದು ಅನಿವಾರ್ಯವಾಗಿದ್ದರೆ ಅವರಿಗೆ ಪರ್ಯಾಯ ಸ್ಥಳಾವಕಾಶ ತೋರಿಸಿ ಕಾಲಾವಕಾಶ ಕೊಟ್ಟು ತೆರವು ಮಾಡಬೇಕಿತ್ತು. ಇದ್ಯಾವುದನ್ನೂ ಮಾಡದೆ ಏಕಾಏಕಿ ತೆರವು ಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಅನ್ಯಾಯವನ್ನ ನೋಡಿಕೊಂಡು ಸುಮ್ಮನೆ ಇರಲ್ಲ ಎಂದು ಗುಡುಗಿದರು.
ಅಧ್ಯಕ್ಷರಿಗೆ ತರಾಟೆ: ಮಾಜಿ ಶಾಸಕರು ಸ್ಥಳ ಪರಿಶೀಲನೆ ಮಾಡಿ ಜಾಗ ಕಳೆದುಕೊಂಡವರ ಜೊತೆಗೆ ಮಾತನಾಡುತ್ತಿರು ಮದ್ಯೆ ಪುರಸಭಾ ಅಧ್ಯಕ್ಷ ಹರಿಪ್ರಸಾದ್ ಮಧ್ಯ ಪ್ರವೇಶ ಮಾಡಿ ಮಾತನಾಡಿದರು. ಈ ವೇಳೆ ಗರಂ ಆದ ಮಂಜುನಾಥ್ ನೀನು ಸುಮ್ಮನೆ ಇರು ಮೀಟಿಂಗ್ ನಲ್ಲಿ ಅಂಗಡಿಗಳನ್ನ ನೆಲ ಸಮ ಮಾಡಿ ಎಂದು ನಿರ್ಧಾರ ಮಾಡಿದ್ದಿರ ಎಂದು ಅವರು ನೀನು ಮಾಡಿರುವ ಕೆಲಸಕ್ಕೆ ನಾನು ಜನರ ಮುಂದೆ ಹೋಗಲು ಆಗುತ್ತ ನೀನು ಹೋಗಲ್ಲ ನಾನು ಜನರ ಬಳಿಗೆ ಹೋಗಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಶಂಕರ್ ನಾಯಕ್ ಗೆ ಕ್ಲಾಸ್: ಬಿಡದಿ ಪೊಲೀಸ್ ಠಾಣೆ ಮುಂದೆ ಬಂದ ಎ.ಮಂಜುನಾಥ್ ಸಿಪಿಐ ಶಂಕರ್ ನಾಯಕ್ ಅವರನ್ನ ಕರೆದು ತೀವ್ರ ತರಾಟೆಗೆ ತೆಗೆದುಕೊಂಡರು. ಪೊಲೀಸರನ್ನ ಹೆಚ್ಚಾಗಿ ನಿಲ್ಲಿಸಿಕೊಂಡು ಅಂಗಡಿಗಳನ್ನ ತೆರವು ಮಾಡಿಸಿದ್ದೀರಿ, ಇದೀಗ ತೆರವು ಮಾಡಿಸಿದ್ದಿರಲ್ಲಾ ಆ ಜಾಗದಲ್ಲಿ ಯಾವ ಕಾಂಪ್ಲೆಕ್ಸ್ ಯಾರ ಸಮಾಧಿ ಕಟ್ಟಿಸುತ್ತೀರಿ ಕಟ್ಟಿಸಿ ನಾನು ನೋಡುತ್ತೇನೆ. ನಾನು ಗಮನಿಸಿದ್ದೇನೆ ತೆರವು ವೇಳೆ ನೀವು ಯಾರಿಗೆ ಯಾವ ಶಬ್ದಗಳನ್ನ ಬಳಸಿದ್ದೀರಿ ಎಂಬುದನ್ನ ನೋಡಿದ್ದೇನೆ ಎಂದರು. ಇದಕ್ಕೆ ಉತ್ತರಿಸಿದ ಶಂಕರ್ ನಾಯಕ್ ಪುರಸಭೆ ವತಿಯಿಂದ ಫುಟ್ ಪಾತ್ ತೆರವು ಕೆಲಸ ಇದೆ ರಕ್ಷಣೆ ಕೊಡಿ ಎಂದು ಪತ್ರ ಬರೆದಿದ್ದರು ಹಾಗಾಗಿ ಸರ್ಕಾರಿ ಜಾಗಕ್ಕೆ ರಕ್ಷಣೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಪುರಸಭಾ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹೀತ್ ಕುಮಾರ್, ಸದಸ್ಯರಾದ ರಾಕೇಶ್, ಸೋಮಶೇಖರ್, ರಮೇಶ್ ಸ್ಥಳಿಯರಾದ ಮುತ್ತಣ್ಣ, ಹೋಟೆಲ್ ಜಗದೀಶ್, ಖಲೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿಡದಿ ಪುರಸಭೆ ವತಿಯಿಂದ ಪಟ್ಟಣದಲ್ಲಿ ಫುಟ್ ಪಾತ್ ತೆರವು ಕಾರ್ಯವನ್ನ ಅವರಿಗಿಷ್ಟ ಬಂದ ಹಾಗೆ ಮಾಡಿಕೊಂಡಿದ್ದಾರೆ. ಬಡವರ ಅಂಗಡಿಗಳನ್ನ ತೆರವು ಮಾಡಿದ್ದಾರೆ ಬಲಡ್ಯರ ಪ್ರಾಬಲ್ಯ ಇರುವ ಅಂಗಡಿಗಳನ್ನ ಹಾಗೆ ಬಿಟ್ಟಿದ್ದಾರೆ. ತೆರವು ಮಾಡಿದ ಜಾಗದಲ್ಲಿ ಮಾಲ್ ಕಟ್ಟುತ್ತಾರ ಇವರು ಹಣ ಲೂಟಿ ಮಾಡಲು ಈ ತೆರವು ಎಂಬುದನ್ನ ಅಸ್ತ್ರ ಮಾಡಿಕೊಂಡಿದ್ದಾರೆ. ಪುರಸಭಾ ಅಧಿಕಾರಿಗಳನ್ನ ಜನರ ಬಳಿಗೆ ಕರೆಯಿಸಿ ತಕ್ಕ ಸಾಸ್ತಿ ಮಾಡವ ಕೆಲಸ ಮಾಡದೆ ಬಿಡಲ್ಲ.