ಜಿಲ್ಲೆ

ಕೋತಿಯನ್ನು ತಿಂದು ಹಾಕಿದ ಚಿರತೆ

ರುದ್ರಪ್ಪ ವಾಲಿ

ಕವಿತಾಳ: ಸಮೀಪದ ಕೊಟೆಕಲ್‌ನ ಗುಡ್ಡದಲ್ಲಿ ರವಿವಾರ ಚಿರತೆ ಕೋತಿಯನ್ನು ತಿಂದಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಗುಡ್ಡದ ಪಕ್ಕದಲ್ಲಿಯೇ ಗ್ರಾಮ ಇದ್ದು ಗುಡ್ಡದಲ್ಲಿ ನೂರಾರು ಸಂಖ್ಯೆಯಲ್ಲಿ ಕೋತಿಗಳು ವಾಸಿಸುತ್ತಿವೆ.

ಚಿರತೆ ಕೋತಿಯ ಬಾಲವನ್ನು ಮಾತ್ರ ಬಿಟ್ಟಿದೆ. ಚಿರತೆಗೆ ಅಂಜಿದ ಕೋತಿಗಳು ರಾತ್ರಿ ಗ್ರಾಮದ ಮಸೀದಿ-ಮಂದಿರದ ಮರದಲ್ಲಿ ಜೀವ ಭಯದಿಂದ ಬಂದು ಕುಳಿತ್ತಿದ್ದವು. 15 ದಿನದ ಹಿಂದೆ ಯಕ್ಲಾಸಪುರ ಕೆರೆಯಲ್ಲಿ ನಾಯಿಯೊಂದನ್ನು ಚಿರತೆ ತಿಂದಿತ್ತು ಎಂದು ಗ್ರಾಮಸ್ಥರಾದ ಬಸವರಾಜ, ಅಮರೇಶ, ರಮೇಶ, ಹುಚ್ಚರಡ್ಡಿ ತಿಳಿಸಿದ್ದಾರೆ.