ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರು ಪೂರ್ಣಿಮೆ ನಿಮಿತ್ತ ಹು-ಧಾ ನಾಗರಿಕ ಪರಿಸರ ಸಮಿತಿ, ಓಂ ನೇಚರ್ ಯೋಗ ಮತ್ತು ಆಕ್ಯೂ ಸೆಂಟರ್ ಆಶ್ರಯದಲ್ಲಿ ಇಲ್ಲಿನ ಶ್ರೀನಗರದ ಬಳಿಯ ಪರಿಸರ ಭವನದಲ್ಲಿ ಜು. 28ರಂದು ಬೆಳಗ್ಗೆ 10 ಗಂಟೆಗೆ 40ರ ನಂತರದ ಆರೋಗ್ಯದಲ್ಲಿ ಆಗುವ ಏರುಪೇರಿಗೆ ಕಾರಣ ಮತ್ತು ಆರೈಕೆ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಅಥಿಯಾಗಿ ಡಾ. ಸೌಮ್ಯಶ್ರೀ ಶರ್ಮ ಆಗಮಿಸಿ ಉಪನ್ಯಾಸ ನೀಡುವರು. ಶಂಕರ ಕುಂಬಿ ಅಧ್ಯಕ್ಷತೆ ವಹಿಸುವರು. ಪರಿಸರ ಸಮಿತಿ ಕಾರ್ಯದರ್ಶಿ ಡಾ.ವಿಲಾಸ ಕುಲಕರ್ಣಿ ಉಪಸ್ಥಿತರಿರವರು ಎಂದು ಯೋಗ ಶಿಕ್ಷಕಿ ಸ್ವಪ್ನ ಕಲಬಶೆಟ್ಟರ ತಿಳಿಸಿದ್ದಾರೆ.