ವಿಜಯಪುರದ ಕಸಾಪ ಸಭಾಂಗಣದಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಚಿಂತನಾ ಗೋಷ್ಠಿ ನಡೆಯಿತು. ಹಾಸಿಂಪೀರ ವಾಲೀಕಾರ, ಮಹೇಶ ಕ್ಯಾತನ್​, ಶಿಲ್ಪಾ ಭಸ್ಮೆ ಮತ್ತಿತರರಿದ್ದಾರೆ. 
ಜಿಲ್ಲೆ

ದೇಶದ ಹಣೆಬರಹ ಬರೆದ ನಾಯಕ

ವಿಜಯಪುರ : ಮಹಾನ್​ ಮಾನವತಾವಾದಿ ಡಾ. ಬಿ.ಆರ್​. ಅಂಬೇಡ್ಕರ್​ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿ. ದೇಶದ ಹಣೆಬರಹ ಬರೆದು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮೂಲಕ ಭವ್ಯ ಭಾರತ ನಿರ್ಮಿಸಿದರು ಎಂದು ವಿಶ್ರಾಂತ ಅರಣ್ಯಾಧಿಕಾರಿ ಮಹೇಶ ಕ್ಯಾತನ್​ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್​. ಅಂಬೇಡ್ಕರ್​ ಚಿಂತನಾ ಗೋಷ್ಠಿಯಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್​ ಅವರು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸಿ ನೀಡಿದ ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವದ ಅಂಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಅವರ ಚಿಂತನೆಗಳನ್ನು ಸಾಕಾರಗೊಳಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಎಲ್ಲರೂ ಸಮಾನವಾಗಿ ನಿಲ್ಲುವಂತಹ ರಾಷ್ಟ್ರ ನಿರ್ಮಾಣ ಮಾಡುವ ಕನಸು ಕಂಡವರು ಅಂಬೇಡ್ಕರರು ಎಂದರು.

ಬೆಂಗಳೂರಿನ ಬಂಜಾರಾ ಅಕಾಡೆಮಿ ಸದಸ್ಯೆ ಸುರೇಖಾ ರಾಠೋಡ ಅಂಬೇಡ್ಕರ್​ ಹಾಗೂ ಮಹಿಳೆ ಎಂಬ ವಿಷಯದ ಕುರಿತು ಹಾಗೂ ಡಾ. ಶೈಲಾ ಬಳಗಾನೂರ ಡಾ.ಬಿ.ಆರ್​ ಅಂಬೇಡ್ಕರ್​ ಅವರ ಜೀವನ ಮತ್ತು ಬದುಕು ಬರಹಗಳ ಕುರಿತು ಉಪನ್ಯಾಸ ನೀಡಿದರು. ಸಿದ್ದು ಮೇಲಿನಮನಿ, ಶಿಕ್ಷಕ ಎಸ್​.ಜಿ. ಲಕ್ಕುಂಡಿಮಠ, ಕವಿ ಮಮತಾ ಮುಳಸಾವಳಗಿ, ಶೋಭಾ ಹರಿಜನ ವೇದಿಕೆಯಲ್ಲಿದ್ದರು. ಶಿಲ್ಪಾ ಭಸ್ಮೆ ಸ್ವಾಗತಿಸಿ ಗೌರವಿಸಿದರು.

ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರವೀನ ಶೇಖ ನಿರೂಪಿಸಿದರು. ರೂಪಾ ರಜಪೂತ ವಂದಿಸಿದರು.

ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ವಿ.ಡಿ. ಐಹೊಳ್ಳಿ, ಡಾ. ಸಿದ್ದಣ್ಣ ಉತ್ನಾಳ, ಬಿ.ಎಂ.ಅಜೂರ, ಕೆ.ಎಚ್​ . ಹಣಮಾಣಿ, ಶಾಂತಾ ವಿಭೂತಿ, ರಾಜೇಸಾಬ ಶಿವನಗುತ್ತಿ, ಶ್ರೀಕಾಂತ ಚಿಮ್ಮಲಗಿ, ಜಿ.ಎಸ್​. ಬಳ್ಳೂರ, ಶಾರದಾ ಐಹೊಳ್ಳಿ, ಎ.ಡಿ. ಮುಲ್ಲಾ, ಸಿದ್ರಾಮಪ್ಪ ಜಂಗಮಶೆಟ್ಟಿ, ಶಂಕರ ಪವಾರ, ಎಸ್​.ಎಸ್​. ಮಾನೆ, ಅಮೋಸಿದ್ಧ ಪೂಜಾರಿ, ತೇಜಸ್ವಿನಿ ವಾಂಗಿ, ಫಕ್ರುದ್ದೀನ್​ ಅಲಿಅಹ್ಮದ್​ ಹಿರೇಕೊಪ್ಪ, ರಶ್ಮಿ ಬದ್ನೂರ, ಸಕ್ಕುಬಾಯಿ ಬ್ಯಾಳಿ, ನಾಮದೇವ ಕಾಳೆ, ರಾಹುಲ್​ ಚವಾಣ, ಗಂಗಮ್ಮ ರಡ್ಡಿ, ಸಿಮ್ರನ್​ ವಾಲೀಕಾರ, ಯಾಸೀನ ಶೇಖ, ಬಿ.ಎಸ್​. ದೊಡಮನಿ, ಕೆ.ಕೆ. ಬನ್ನೆಟ್ಟಿ, ಲತಾ ವಾಲೀಕಾರ, ಸಹನಾ ಬಿರಾದಾರ, ಸನ್ನಿಧಿ ಬಿರಾದಾರ, ಲಕ್ಷಿ$್ಮ ಬಿರಾದಾರ ಮತ್ತಿತರರಿದ್ದಾರೆ.