ಆನೇಕಲ್: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ 235ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಕರೆಸಿ ಚಂದಾಪುರದ ಸ್ವಾಮಿ ವಿವೇಕಾನಂದ ಶಾಲೆಯ ಕ್ರೀಡಾಂಗಣದಲ್ಲಿ ಗುರುವಾರ ಪರೇಡ್ ನಡೆಸಲಾಯಿತು.
ಗ್ರಾಪಂ ಚುನಾವಣೆ ಹತ್ತಿರವಾಗುತ್ತಿದ್ದು, ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುವುದು, ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಮಹದೇವಪ್ಪ ಎಚ್ಚರಿಕೆ ನೀಡಿದರು.
ರೌಡಿ ಪೇರಡ್‌ಗೆ ಬರದೆ ಅಧಿಕಾರಸ್ಥರಿಂದ ಕರೆ ಮಾಡಿ ಒತ್ತಡ ಹಾಕಿದರೂ ತಕ್ಕ ಶಾಸ್ತಿ ಮಾಡಲಾಗುವುದು. ಎಲ್ಲರೂ ನ್ಯಾಯಯುತವಾಗಿ ಬದುಕಬೇಕು. ಎಲ್ಲರಂತೆ ಸಮಾಜದಲ್ಲಿ ಬದುಕುತ್ತೇವೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎನ್ನುವುದಾದರೆ ಪೊಲೀಸರೇ ಉತ್ತಮ ಬದುಕಿಗೆ ಸಹಕಾರ ನೀಡುತ್ತಾರೆ ಎಂದರು.
ಆನೇಕಲ್ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ ಮಾತನಾಡಿ, ರೌಡಿಗಳ ರೀತಿಯಲ್ಲಿ ವರ್ತಿಸಿ ಅಪರಾಧ ಕೃತ್ಯಗಳಲ್ಲಿ ಭಾಗಯಾಗುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಕಾನೂನು ಉಲ್ಲಂಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
7 ಠಾಣೆಗಳ ವ್ಯಾಪ್ತಿಯ 552 ರೌಡಿಶೀಟರ್‌ಗಳ ಪೈಕಿ 235 ಮಂದಿ ಮಾತ್ರ ಪರೇಡ್‌ಗೆ ಹಾಜರಾಗಿದ್ದು, ಪಟ್ಟಿಯಲ್ಲಿರುವ ಬಹುತೇಕರು ಹಾಜರಾಗಿಲ್ಲ. ಅಂತಹವರನ್ನು ಠಾಣೆಗೆ ಕರೆಸಿ ಪೊಲೀಸ್ ಭಾಷೆಯಲ್ಲೇ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಬ್‌ಇನ್‌ಸ್ಪೆಪೆಕ್ಟರ್‌ಗಳಾದ ಮಧುಸೂದನ್, ಹರೀಶ್, ಗೋವಿಂದ್, ಜಗದೀಶ್ ಹಾಜರಿದ್ದರು.