ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಡೆಯಿತು. 
ಜಿಲ್ಲೆ

ನಮ್ಮ ನೆಲದ ಶ್ರೀಮಂತಿಕೆ ಪರಿಚಯಿಸಿದ ಕುಂದಾಪ್ರ ಭಾಷೆ

ಕುಂದಾಪುರ: ಕುಂದಾಪುರ ತಾಲೂಕಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಕುಂದಾಪ್ರರ ಕನ್ನಡ ದಿನವನ್ನು ಗುರುವಾರ ಆಚರಿಸಲಾಯಿತು.

ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ ಎಸ್.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಬದುಕು, ನಡೆ ನುಡಿಯು ಪ್ರಾದೇಶಿಕ ಭಾಷಾ ಸಂಸ್ಕೃತಿಯ ಪ್ರತಿರೂಪವಾಗಿರುತ್ತದೆ. ಕುಂದಾಪ್ರ ಭಾಷೆ ಎನ್ನುವುದು ವಿಶ್ವದಾದ್ಯಂತ ಹಬ್ಬಿ ನಮ್ಮ ನೆಲದ ಶ್ರೀಮಂತಿಕೆಯನ್ನು ಪರಿಚಯಿಸಿದ್ದಲ್ಲದೆ, ನಮ್ಮ ಗತಕಾಲದ ಸಂಸ್ಕೃತಿಯ ಬದುಕನ್ನು ಅನಾವರಣಗೊಳಿಸುತ್ತಿದೆ. ಅಚ್ಚುಕಟ್ಟಾಗಿರುವ ನಮ್ಮ ಕುಂದಾಪ್ರ ಭಾಷೆಯು ಕೇಳುವುದಕ್ಕೂ ಹಿತ ಮತ್ತು ಪಾಲಿಸುವುದಕ್ಕೂ ಅನುಕರಣೀಯ ಎಂದರು.

ಪ್ರಾಂಶುಪಾಲೆ ಡಾ.ರೂಪಾ ಶೆಣೈ ಮಾತನಾಡಿದರು. ವಿದ್ಯಾರ್ಥಿಗಳಾದ ಅಶ್ವಿತಾ, ಮನಸ್ವಿ, ಪ್ರೀತಮ್, ಪ್ರಥಮ್, ಪ್ರಾಪ್ತಿ, ಮಾನ್ಯ, ಹಿಮಾಂಶು ಮತ್ತು ತ್ರಿಶಾ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು. ಅವನಿ ಸ್ವಾಗತಿಸಿ, ನಿರೂಪಿಸಿದರು.