ದೊಡ್ಡಬಳ್ಳಾಪುರ : ನಗರದ ಈಶ್ವರ ಬಸವೇಶ್ವರ ಸೇವಾ ಟ್ರಸ್ಟ್ನಿಂದ ದೇವರಾಜನಗರದಲ್ಲಿ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಗಣೇಶ, ಪಾರ್ವತಿ ಸಮೇತ ಈಶ್ವರ ಕಾಲಭೈರವ ನೂತನ ಶಿಖರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಬಸವೇಶ್ವರ, ಆಂಜನೇಯ, ಮಾಚೀಶ್ವರ, ನವಗ್ರಹ, ನಾಗ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಅ.25ರಂದು ಮಂಗಳವಾದ್ಯ ಸಮೇತ ಪೂರ್ಣಕುಂಭಗಳೊಡನೆ ಗಂಗಾಪೂಜೆ, ಆಲಯ ಪ್ರವೇಶ ಮಹಾಗಣಪತಿ ಪೂಜಾ, ಶೈವ ಪುಣ್ಯಾಹ, ದೇವನಾಂ ಪಂಚಗವ್ಯಾ ಪೂಜಾ, ಋತ್ವಿಗರಣ, ರಕ್ಷಾಬಂಧನ, ಅಸ್ತ್ರ ರಾಜಪೂಜಾ, ರಾಕ್ಷೆಜ್ಞ ಪೂಜಾ, ಅಂಕುರಾರೋಪಣ ನೆರವೇರಿತು. 26ರಂದು ಶ್ರೀ ಮಹಾಗಣಪತಿ ಪೂಜಾ, ಧ್ವಜಾರೋಹಣ, ಶೈವಾಗ್ನಿ ಪ್ರತಿಷ್ಠಾಪನೆ, ಮಹಾಹೋಮ, ಪೂಜೆ, ಕಳಶ ಪ್ರತಿಷ್ಠಾಪನೆ, ವಿಗ್ರಹ ಧಾನ್ಯಾಧಿವಾಸ, ಶೈಯ್ಯಾಧಿವಾಸ, 27ರಂದು ಮಹಾಚಕ್ರ ಸ್ಥಾಪನೆ, ನವರತ್ನ ಪಂಚಲೋಹ ಸಮೇತ ವಿಗ್ರಹಗಳ ಪ್ರತಿಷ್ಠಾಪನೆ, ನೇತ್ರೋಲನ, ಪೂರ್ಣಾಹುತಿ ಕಾರ್ಯಕ್ರಮ ನೆರವೇರಿಸಲಾಯಿತು.
ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಗೆ ಪಾದಪೂಜೆ ಸಲ್ಲಿಸಲಾಯಿತು. ಟ್ರಸ್ಟ್ ಸದಸ್ಯರಾದ ಜಿ.ವೆಂಕಟೇಶ್, ಎಸ್.ಶಿವಣ್ಣ, ಲತಾ ಆರಾಧ್ಯ, ಕೆ.ಭರತ್ ಕೃಷ್ಣಮೂರ್ತಿ, ಕೆ.ವಿ.ವಸಂತ್ ಕುಮಾರ್, ಬಿ.ಆರ್.ಜಯಶಂಕರ್, ಕೆ.ಗಂಗಾಧರ್, ಎಂ.ಮಂಜುನಾಥ್, ನಟರಾಜ್, ರಾಕೇಶ್, ಪ್ರಧಾನ ಅರ್ಚಕ ಕೆ.ಎನ್.ಶಶಿಧರ್ಸ್ವಾಮಿ, ನಗರಸಭೆ ಸದಸ್ಯ ಶಿವಶಂಕರ ಇತರರು ಇದ್ದರು.