ರಾಯಬಾಗ: ಸರಳ, ಸಜ್ಜನಿಕೆಯ ಧೀಮಂತ ನಾಯಕ ಡಿ.ದೇವರಾಜ ಅರಸು ಜೀವನ ನಮಗೆಲ್ಲ ಆದರ್ಶವಾಗಿದೆ ಎಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದ ಕೆಇಬಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ೧೧೦ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಅರಸು ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿ, ಜನಪರ ಆಡಳಿತ ನಡೆಸಿದ್ದಾರೆ ಎಂದರು.
ವಕೀಲ ರಮೇಶಕುಮಾರ ಘಂಟಿ ಮಾತನಾಡಿ, ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದ ಧೀಮಂತ ನಾಯಕ ಅರಸು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಆರ್.ಎಸ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್., ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ಪಿಡಬ್ಲ್ಯೂಡಿ ಎಇಇ ಆರ್.ಬಿ.ಮನವಡ್ಡರ, ಜಿಪಂ ಎಇಇ ವಿ.ಆರ್.ಭಜಂತ್ರಿ, ಸುರೇಶ ಮಲಾಜ, ಎಚ್.ಎಲ್.ಪೂಜಾರಿ, ಸಿದ್ದು ಪೂಜಾರಿ, ಏಕನಾಥ ಮಾಚಕನೂರ, ಅನಿಲ ಬೊಮ್ಮನವರ, ಅಧಿಕಾರಿಗಳು ಹಾಗೂ ಇತರರು ಇದ್ದರು. ತಾಲೂಕು ಹಿಂದುಳಿದ ವರ್ಗ ಕಲ್ಯಾಣ ಅಧಿಕಾರಿ ಕಲ್ಪನಾ ಕಾಂಬಳೆ ಸ್ವಾಗತಿಸಿದರು. ಶಿಕ್ಷಕ ಬಿ.ಎಲ್.ಘಂಟಿ ನಿರೂಪಿಸಿದರು.