ಮೈಸೂರು: ಕನ್ನಡ ಭಾಷೆಗೆ ಸಾವಾಲುಗಳಿವೆ, ಆದರೆ ಸಾವಿಲ್ಲ. ಕನ್ನಡ ಜನರ ನಾಡಿಮಿಡಿತವಾಗಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ನಗರದ ಮಾಸನಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಸಂಘದ ವತಿಯಿಂದ ಶುಕ್ರವಾರ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸವಾಲು ಬಂದಾಗಲೆಲ್ಲ ಕನ್ನಡ ಮತ್ತೆ ಚಿಗುರಿದೆ. ಕನ್ನಡಕ್ಕೆ 2000ಕ್ಕಿಂತ ಹೆಚ್ಚು ಇತಿಹಾಸವಿದೆ. ಹಲ್ಮಿಡಿ ಶಾಸನ (ಕ್ರಿ.ಶ. 450) ಕನ್ನಡದ ಅತ್ಯಂತ ಹಳೆಯ ಪೂರ್ಣ ಶಾಸನ ಎಂದು ಗುರುತಿಸಲಾಗಿದೆ. 2008ರಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿದೆ. ದೇಶದಲ್ಲಿ ಈ ಗೌರವ ಪಡೆದಿರುವುದು ಕೇವಲ 6 ಭಾಷೆಗಳು ಮಾತ್ರ. ಇದಲ್ಲದೆ, ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಸಾಮಾನ್ಯವೇ? ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ, ಜ್ಞಾನದ ಭಾಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಎನ್.ಎಸ್. ಹರಿನಾರಾಯಣ, ಪ್ರಾಧ್ಯಾಪಕ ಡಾ.ನಿವೇದಿತಾ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮನೋಜ್ ಇದ್ದರು.
ಮೈಸೂರು ನಗರದ ಮಾಸನಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಎಂ.ನಂಜಯ್ಯ ಹೊಂಗನೂರು, ಎನ್.ಎಸ್. ಹರಿನಾರಾಯಣ, ಡಾ.ನಿವೇದಿತಾ, ಮನೋಜ್ ಇದ್ದರು.