ಆನೆಗಳಿಂದ ಹಾನಿಗೆ ಒಳಗಾದ ಭತ್ತದ ನಾಟಿ. 
ಜಿಲ್ಲೆ

ಹುದುಗೂರು ಸುತ್ತಮುತ್ತ ಕಾಡಾನೆಗಳ ಹಾವಳಿ

ಕುಶಾಲನಗರ: ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಸುತ್ತಮುತ್ತ ಕಳೆದೆರಡು ದಿನಗಳಿಂದ ಆನೆಕಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಹಾವಳಿ ಮಾಡುತ್ತಿವೆ.


ಹಾರಂಗಿ ನದಿಯ ಸಮೀಪದ ಬೆಂಡೆಬೆಟ್ಟ ಅರಣ್ಯದ ಮೂಲಕ ಬಂದು ಹಾರಂಗಿ ನದಿಯನ್ನು ದಾಟಿ ಸಮೀಪದ ಜಮೀನಿಗೆ ದಾಳಿ ಮಾಡಿ ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಲಾಗಿರುವ ಭತ್ತ ಗದ್ದೆಗಳ ಬೆಳೆಯನ್ನು ತಿಂದು ತುಳಿದ ಭಾಶರಿ ನಷ್ಟ ಮಾಡಿವೆ.
ಯಡನವಾಡು ಮೀಸಲು ಅರಣ್ಯ ಪ್ರದೇಶಗಳ ಕಡೆಯಿಂದಲೂ ಕಾಡಾನೆಗಳ ಹಿಂಡು ಗದ್ದೆಗಳಲ್ಲಿ ಬೆಳೆ ನಾಶಪಡಿಸಿವೆ. ಹುದುಗೂರು ಗ್ರಾಮದ ರಮೇಶ್, ಭರತ್, ಮಂಜುನಾಥ, ಚೆಂಗಪ್ಪ ಎಂಬ ರೈತರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿದ ಪರಿಣಾಮವಾಗಿ ನಾಟಿಯಾಗಿದ್ದ ಭತ್ತದ ಗದ್ದೆ ಸಂಪೂರ್ಣವಾಗಿ ಹಾಳಾಗಿದೆ.

ಆನೆ ಕಂದಕ ಮತ್ತು ಟೆಂಟಕಲ್ ಸೋಲಾರ್ ಲೈನ್ ಕಾಡಾನೆಗಳಿಂದ ಹಾಳಾಗಿದ್ದ ಸ್ಥಳಗಳ ಪರಿಶೀಲನೆ ನಡೆಸಿ ಕೆಟ್ಟು ನಿಂತಿದ್ದ ಸೋಲಾರ್ ಬ್ಯಾಟರಿಗಳ ಅಳವಡಿಕೆ ಮಾಡುವ ಕಾರ್ಯದಲ್ಲಿ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರಶ್ ಸೇರಿದಂತೆ ಸಿಬ್ಬಂದಿ ವರ್ಗದರು ತೊಡಗಿದ್ದಾರೆ. ಕಾಡಾನೆಗಳು ಭತ್ತ ಗದ್ದೆಗಳನ್ನು ತುಳಿದ ಸ್ಧಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ಸಿಬ್ಬಂದಿ ವರ್ಗ ಭೇಟಿ ನಿಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.