ಮುಂಡಗೋಡ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ ಅವರು ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ವೈದ್ಯರ ಗೈರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಧೀಶೆ ಧನವತಿ ಅವರು, ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಶಿವಕುಮಾರ ಮತ್ತು ದೀಪಾ ಆರ್. ಗೈರಾಗಿದ್ದರು. ಈ ಹಿಂದೆ ಜುಲೈ 15ರಂದು ನ್ಯಾಯಾಧೀಶೆ ಭೇಟಿ ನೀಡಿದ್ದಾಗ ಡಾ. ಶಿವಕುಮಾರ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸಲಾಗಿತ್ತು. ನಂತರ ವೈದ್ಯರಿಗೆ ಸರಿಯಾದ ಸಮಯಕ್ಕೆ ಹಾಜರಿರಲು ಸೂಚಿಸಲಾಗಿತ್ತು. ಮತ್ತೆ ಶನಿವಾರ ನ್ಯಾಯಾಧೀಶೆ ಭೇಟಿ ನೀಡಿದಾಗ ಅವರು ಗೈರಾಗಿರುವುದು ಕಂಡು ಕೋಪಗೊಂಡರು.
ಆಸ್ಪತ್ರೆಯ ಸುತ್ತಮುತ್ತ ಪರಿಶೀಲಿಸಿದಾಗ ಸ್ವಚ್ಛತೆ ಕಾಪಾಡಿಕೊಂಡಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.