ನಂದಗುಡಿ : ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಯಲ್ಲಿ ಇಟ್ಟಸಂದ್ರ ಗ್ರಾಮ ಇರಲಿಲ್ಲ. ಆದರೆ ಆ ಪಟ್ಟಿಯಲ್ಲಿ ಇಟ್ಟಸಂದ್ರವನ್ನು ಸೇರಿಸಿ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.
ನಂದಗುಡಿ ಹೋಬಳಿಯ ಇಟ್ಟಸಂದ್ರ ಕೆರೆಗೆ ಬಾಗಿನ ಅರ್ಪಣೆ, ಹೈ ಮಾಸ್ಟ್ ದೀಪ ಉದ್ಘಾಟನೆ ಹಾಗೂ ದಿ. ವೆಂಕಟರಮಣ ಗೌಡರ ಬಡಾವಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂದಗುಡಿ ವ್ಯಾಪ್ತಿಯಲ್ಲಿ ನಿವೇಶನ ವಂಚಿತರಿಗೆ ನಿವೇಶನ ಹಂಚಿಕೆ ಮಾಡಲು 50ಕ್ಕೂ ಹೆಚ್ಚು ಎಕರೆ ಜಾಗವನ್ನು ಗುರುತಿಸಿದ್ದು, ಪಂಚಾಯಿತಿಗೆ ಹಸ್ತಾಂತರಿಸಿ ಲೇ ಹೌಟ್ ನಿರ್ಮಿಸಿ, ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರದ ಸ.ನಂ.78ರಲ್ಲಿ 7.28 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ಶ್ರೀ ನಿವೇಶನ ರಹಿತ 196 ಫಲಾನುಭವಿಗಳ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಸಗೀರ್ ಅಹಮದ್, ಗ್ರಾಪಂ ಅಧ್ಯೆ ರೂಪಾ ಚನ್ನಕೇಶವ, ಉಪಾಧ್ಯೆ ನಂದಿನಿ ರವಿ, ವಿಎಸ್ಎಸ್ವಿಎನ್ ಅಧ್ಯಕ್ಷ ಶಂಕರ್ನಾರಾಯಣ್, ನಾರಾಯಣಗೌಡ, ನಿರ್ದೇಶಕರಾದ ಎನ್.ಡಿ. ರಮೇಶ, ಎಚ್.ಕೆ.ನಾರಾಯಣಗೌಡ, ಎಚ್.ಎನ್.ಧಮೇರ್ಶ್, ಚಂದ್ರಪ್ಪ, ಗ್ರಾಪಂ ಸದಸ್ಯರಾದ ರಮೇಶ್, ಬಿಂದು ದೇವೇಗೌಡ, ರಾಮಾಂಜಿನಪ್ಪ, ಸರೋಜಮ್ಮ ಜಯರಾಮ್, ಎಚ್.ಎಂ.ಮೂರ್ತಿ, ಮಧು, ಲಕ್ಷಿ$್ಮನಾರಾಯಣ್, ಎನ್.ಎನ್.ಮಂಜುನಾಥ್ ಇತರರು ಇದ್ದರು.