ಜಿಲ್ಲೆ

ಅಂತಾರಾಷ್ಟ್ರೀಯ ಮಾದಕದ್ರವ್ಯ ಕಳ್ಳಸಾಗಣೆ ವಿರೋಧಿ ದಿನ: ರಾಜ್ಯದ ವಿವಿದೆಡೆ ಸಾವಿರಾರು ಕೆಜಿ ಮಾದಕ ದ್ರವ್ಯ ನಾಶ

ಉತ್ತರಕನ್ನಡ/ಗದಗ: ಅಂತಾರಾಷ್ಟ್ರೀಯ ಮಾದಕದ್ರವ್ಯ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ರಾಜ್ಯದ ವಿವಿದ ಪೊಲೀಸ್​ ಠಾಣೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕದ್ರವ್ಯವನ್ನು ನಾಶಪಡಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 69 ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದ 75ಕೆಜಿ ಮಾದಕ ವಸ್ತುಗಳನ್ನು ಮೂಟೆ ಕಟ್ಟಿ, ನಂತರ ಸುಡಲಾಯಿತು. ಒಟ್ಟು 16,17,460 ಲಕ್ಷ ಮೌಲ್ಯದ 75.119 ಕೆಜಿ ಗಾಂಜಾ, 195 ಗ್ರಾಂ ಚರಸ್, 61 ಗಾಂಜಾ ಗಿಡ ಸೇರಿ 75.314 ಕೆಜಿ ಮಾದಕದ್ರವ್ಯವನ್ನು ನಾಶಪಡಿಸಲಾಯಿತು.

ಅಂಕೋಲಾ ತಾಲೂಕಿನ ಬೊಗ್ರಿಬೈಲ್‌ನಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ, ಎಸ್ಪಿ ಸುಮನ್ ಪೆನ್ನೇಕರ್, ವಿಲೇವಾರಿ ಸಮಕ್ಷಮ ಸದಸ್ಯರ ಸಮ್ಮುಖದಲ್ಲೇ ನಾಶಪಡಿಸಲಾಯಿತು.

ಇನ್ನು ಗದಗದಲ್ಲಿ ಜಪ್ತಿ ಮಾಡಲಾಗಿದ್ದ, 6,118 ಕೆಜಿ ಗಾಂಜಾವನ್ನು ಎಸ್​ಪಿ ಶಿವಪ್ರಕಾಶ್​ ಅವರ ನೇತೃತ್ವದಲ್ಲಿ ಗದಗ ತಾಲೂಕಿನ ನರಸಾಪೂರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ನಾಶಪಡಿಸಲಾಯಿತು.ಗದಗ, ನರಗುಂದ ತಾಲೂಕು ಸೇರಿ ಜಿಲ್ಲೆಯ ಹಲವಡೆ 9 ಪ್ರಕರಣಗಳಲ್ಲಿ ಗಾಂಜಾ ಜಪ್ತಿ ಮಾಡಲಾಗಿತ್ತು.

ಚಾಮರಾಜನಗರ ವಿವಿಧೆಡೆ ಪೊಲೀಸರು ದಾಳಿ ನಡೆಸಿ, 33 ಲಕ್ಷ ಮೌಲ್ಯದ 128 ಕೆ.ಜಿ. ಗಾಂಜಾ ನಾಶಪಡಿಸಲಾಯಿತು. ಮೈಸೂರಿನ ಜಯಪುರದ ಬಳಿಯ ಗುಜ್ಜೇಗೌಡನಪುರ ಗ್ರಾಮದ ಕುಲುಮೆಯಲ್ಲಿ ನಾಶಪಡಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಕುಮಾರ್ ಹಾಜರಿದ್ದರು.(ದಿಗ್ವಿಜಯ ನ್ಯೂಸ್​)