ವಿಜಯಪುರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಪ್ರೊ. ಬಿ.ಎಸ್​. ಬೆಳಗಲಿ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ, ಸಂಗಮೇಶ ಮೇತ್ರಿ, ಸಂಗಮೇಶ ಬದಾಮಿ ಮತ್ತಿತರರಿದ್ದಾರೆ. 
ಜಿಲ್ಲೆ

ಶರಣರ ಸತ್ಸಂಗದಿಂದ ಅಂತರಂಗ ಪರಿಶುದ್ಧ

ವಿಜಯಪುರ: ಬಸವಾದಿ ಶರಣರು ವಚನಗಳ ಮೂಲಕ ನಿತ್ಯ, ಸತ್ಯ ಬದುಕಿನ ಶ್ರೇಷ್ಠತೆಯನ್ನು ಜಗತ್ತಿಗೆ ನೀಡಿದ್ದಾರೆ. ಶರಣರ ಸತ್ಸಂಗದಿಂದ ಅಂತರಂಗ ಪರಿಶುದ್ಧಗೊಳ್ಳಲಿದ್ದು, ಅಂತಹ ಶ್ರೇಷ್ಠ ಶರಣರಲ್ಲಿ ಡೋಹರ ಕಕ್ಕಯ್ಯ ಕೂಡ ಒಬ್ಬರು ಎಂದು ಪ್ರೊ. ಬಿ.ಎಸ್​. ಬೆಳಗಲಿ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಡೋಹರ ಕಕ್ಕಯ್ಯನವರ ಬದುಕು ಬರಹ ಕುರಿತು ಉಪನ್ಯಾಸ ನೀಡಿ ಅವರು, ಕಾಯಕ, ದಾಸೋಹ, ಸಮಾನತೆ ಪರಿಶುದ್ಧತೆ ಎಲ್ಲವೂ ಡೋಹರ ಕಕ್ಕಯ್ಯನವರ ವಚನಗಳಲ್ಲಿ ಅಡಕವಾಗಿದೆ ಎಂದರು.

ಡೋಹರ ಕಕ್ಕಯ್ಯನವರು ಬಸವಣ್ಣನವರಿಗಿಂತ ಹಿರಿಯರಾದರೂ ಅಧ್ಯಾತ್ಮದ ಹಸಿವನ್ನು ನೀಗಿಸಲು ಪುಣೆಯ ಹಳ್ಳಿಯಿಂದ ಕಲ್ಯಾಣಕ್ಕೆ ಬಂದು ಅನುಭಾವಿಗಳಾಗಿ ಅಭಿನವ ಚನ್ನಮಲ್ಲಿಕಾರ್ಜುನ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ. ಸದ್ಯ ಅವರು ರಚಿಸಿದ ಆರು ವಚನಗಳು ಲಭ್ಯವಾಗಿದ್ದು, ಅವೆಲ್ಲವೂ ಸಮಾನತೆಗಾಗಿ ರಚಿಸಿದ್ದಾಗಿವೆ ಎಂದು ಹೇಳಿದರು.

ಸಾಹಿತಿ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಡೋಹರ ಕಕ್ಕಯ್ಯ ಕೆಳಸ್ತರದ ವ್ಯಕ್ತಿಯಾದರೂ ಗುರು, ಲಿಂಗ, ಜಂಗಮ, ದಾಸೋಹ ಕಲ್ಪನೆ ಇತ್ತು. ಸಾಮಾಜಿಕ ಸಾಮರಸ್ಯ ಬರಬೇಕು ಎನ್ನುವ ಉದ್ದೇಶವಿತ್ತು. ಚರ್ಮ ಹದ ಮಾಡುವ ಕಾಯಕದ ಜತೆಗೆ ಸಿದ್ಧಾಂತ, ಪ್ರಸಾದ, ನಡೆ, ನುಡಿ, ಧರ್ಮ ಅನುಸರಿಸಿ ಬಂದವರು. ಮುಟ್ಟದಕಾರಣ ಬಯಲು ಬಯಲಾದೆನು ಎಂದು ವಚನಗಳಲ್ಲಿ ವ್ಯಕ್ತವಾಗಿದೆ ಎಂದರು.

ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಶರಣರಿಗೆ ಸಮಾನತೆ ತರಬೇಕು. ಕಾಯಕ, ದಾಸೋಹ, ಅನುಭಾವ ಈ ಮೂಲಕವಾಗಿಯೇ ಸಮಾಜದಲ್ಲಿ ಹಿರಿಮೆಯನ್ನು ಕಂಡುಕೊಂಡವರು ಡೋಹರ ಕಕ್ಕಯ್ಯನವರು. ಕಾಯಕ, ದಾಸೋಹದ ಬಗ್ಗೆ ವ್ಯಕ್ತಿತ್ವದ ವಿವರಣೆ, ಮಾನವೀಯ ಮೌಲ್ಯಗಳು, ಚಾರಿತ್ರಿಕ ಹಿನ್ನಲೆ ಜೀವಂತ ಸಾ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಡಾ. ಸುಭಾಸಚಂದ್ರ ಕನ್ನೂರ ಪರಿಚಯಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ವಿಠಲ ತೇಲಿ ವಂದಿಸಿದರು.

ಸಹದೇವ ನಾಡಗೌಡರ, ಮಲ್ಲಿಕಾರ್ಜುನ ಅಮರಣ್ಣವರ, ಭೀಮಣ್ಣ ಭಜಂತ್ರಿ, ಮಹಾದೇವ ಹಾಲಳ್ಳಿ, ಜಂಬುನಾಥ ಕಂಚ್ಯಾಣಿ, ಈರಣ್ಣ ತೊಂಡಿಕಟ್ಟಿ, ಡಾ. ವಿ.ಡಿ. ಐಹೊಳ್ಳಿ, ಡಾ. ಎಂ.ಎಸ್​. ಮಾಗಣಗೇರಿ, ಶರಣಗೌಡ ಪಾಟೀಲ, ಎಂ.ಜಿ. ಯಾದವಾಡ, ದ್ರಾಾಯಣಿ ಬಿರಾದಾರ, ಎಸ್​.ಎನ್​. ಶಿವಣಗಿ ಮತ್ತಿತರರಿದ್ದರು.