ಜಿಲ್ಲೆ

ಗಾಯಗೊಂಡಿದ್ದ ಯುವಕ ಸಾವು

ಆರ್.ಕೃಷ್ಣ

ಮೈಸೂರು: ಮಾಲ್‌ನಲ್ಲಿ ವಿದ್ಯುತ್ ಸೈನ್ ಬೋರ್ಡ್ ತೆಗೆಯುವಾಗ 60 ಅಡಿ ಎತ್ತರದಿಂದ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಕುಂಬಾರಕೊಪ್ಪಲಿನ ಚಂದ್ರು (22) ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.

ನಗರದ ಜಯಲಕ್ಷ್ಮೀಪುರಂನಲ್ಲಿರುವ ಬಿ.ಎಂ.ಹ್ಯಾಬಿಟೇಟ್ ಮಾಲ್‌ನಲ್ಲಿ ಸೋಮವಾರ ಸಂಜೆ ವಿದ್ಯುತ್ ಸೈನ್ ಬೋರ್ಡ್ ತೆಗೆಯುವಾಗ ಪಿಒಪಿ ಮೇಲೆ ಕಾಲಿಟ್ಟು, ಎಲೆಕ್ಟ್ರಿಷಿಯನ್ ಅಗಿ ಕೆಲಸ ಮಾಡುತ್ತಿದ್ದ ಹುಣಸೂರು ತಾಲೂಕು ನೇರಳೆಕುಪ್ಪೆಯ ವೀರಭದ್ರಶೆಟ್ಟಿ ಅವರ ಪುತ್ರ ಸುನೀಲ್‌ಜಾರಿ ಬಿದ್ದಿದ್ದರು.

ಚಲನಚಿತ್ರ ವೀಕ್ಷಿಸಲು ಬಂದಿದ್ದ ಚಂದ್ರು, ಇದನ್ನು ಕಂಡು ಸುನೀಲ್ ರಕ್ಷಣೆಗೆ ಮುಂದಾಗಿದ್ದರು. ಆದರೆ ಆಯತಪ್ಪಿ ಇಬ್ಬರು ಸುಮಾರು 60 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಸುನೀಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.