ಹುಬ್ಬಳ್ಳಿ: ತಾಲೂಕಿನ ನಲವಡಿ ಬಳಿ ನಿಂತಿದ್ದ ಟಿಪ್ಪರ್‌ಗೆ ಕಾರ್ ಡಿಕ್ಕಿಯಾಗಿ ಗಾಯಗೊಂಡು ಇಲ್ಲಿಯ ಕೆಎಂಸಿಆರ್‌ಐಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯು, ಮಂಗಳವಾರ ಬೆಳಗಿನ ಜಾವದಲ್ಲಿ ಮೃತಪಟ್ಟಿದ್ದಾರೆ.
ಅಣ್ಣಿಗೇರಿಯ ಜಲೀಲ್ ಅಹ್ಮದ್ (36) ಮೃತರು. ಸೋಮವಾರ ರಸ್ತೆ ಅಪಘಾತದಲ್ಲಿ ಶಬಾನಾ ಅಹ್ಮದ್ ಅವರು ಮೃತಪಟ್ಟಿದ್ದರು. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಜಲೀಲ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.