ಜಿಲ್ಲೆ

ಪರಶುರಾಮ ಸೃಷ್ಟಿಯಲ್ಲಿ ನಾಗಾರಾಧನೆಗೆ ಮಹತ್ವ

ಗಂಗೊಳ್ಳಿ: ಪರಶುರಾಮ ಸೃಷ್ಟಿಯ ನಾಡಿನಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ನಾಗ ದೇವರು ಕಲಿಯುಗದಲ್ಲಿ ಪ್ರತ್ಯಕ್ಷ ದೇವರು ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.

ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಹಿಂದಿನ ದಿನಗಳಲ್ಲಿ ದೇವರ ಮೇಲಿನ ಪ್ರೀತಿ, ಭಕ್ತಿಯಿಂದ ಬೆಣ್ಗೇರೆಯಲ್ಲಿ ಶ್ರೀ ನಾಗ ದೇವಸ್ಥಾನವನ್ನು ಇಷ್ಟು ಎತ್ತರಕ್ಕೆ ತಂದು ವ್ಯವಸ್ಥಿತ ದೇವಳವಾಗಿ ರೂಪಿಸಿರುವುದು ಮೇಸ್ತ ಸಮಾಜದ ಹೆಮ್ಮೆ. ನಾಗರಾಧನೆ, ನಾಗ ದೇವಸ್ಥಾನದ ಮೂಲಕ ಈ ಭಾಗದ ಎಲ್ಲರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ವಿಶ್ವನಾಥ ಶೇರುಗಾರ್ ಬಾಳೆಮನೆ, ಬುಳ್ಳು ಪೂಜಾರ‌್ತಿ ಮತ್ತು ಶೇಖರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕೃಷ್ಣಮೂರ್ತಿ ವಾಮನ ಆಚಾರ್ಯ ಸಾಗರ, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ ಅಧ್ಯಕ್ಷ ರಾಮಚಂದ್ರ ಬಿ.ಶಿರೂರ್‌ಕರ್, ವಿನೋದ ಕುಮಾರ್ ಗುಜ್ಜಾಡಿ, ಬೆಣ್ಗೇರೆ ಖಾರ್ವಿ ಸಮಾಜ ಅಧ್ಯಕ್ಷ ಮೋಹನ ಖಾರ್ವಿ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ನಾಯಕವಾಡಿ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷ ರಘುರಾಮ ಟಿ., ಗಂಗೊಳ್ಳಿ ಶ್ರೀರಾಮ ಮಂದಿರ ಅಧ್ಯಕ್ಷ ರಾಜೇಶ ಶೇರುಗಾರ್ ಎಂ.ಜಿ., ಶಿವಮೊಗ್ಗ ಚಾರೋಡಿ ಮೇಸ್ತ ಅಭ್ಯುದಯ ಸಂಘದ ಅಧ್ಯಕ್ಷ ರುಕ್ಮಾನಂದ ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ನಾರಾಯಣ ಟಿ.ಪೂಜಾರಿ, ಮಡಿಕಲ್ ಸುರೇಶ ಖಾರ್ವಿ, ಅಧ್ಯಕ್ಷ ಗಣಪತಿ ವಿ.ಮೇಸ್ತ, ಕಾರ್ಯದರ್ಶಿ ರಾಘವೇಂದ್ರ ವಿ.ಮೇಸ್ತ, ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ವಿ.ಮೇಸ್ತ, ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ವಿಶ್ವನಾಥ ವಿ.ಮೇಸ್ತ, ಕಾರ್ಯದರ್ಶಿ ರಾಮದಾಸ ಕೆ.ಮೇಸ್ತ ಉಪಸ್ಥಿತರಿದ್ದರು. ರಾಘವೇಂದ್ರ ವಿ.ಕೆ. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಪ್ರಸನ್ನ ಮೇಸ್ತ ಪ್ರಾಸ್ತಾವಿಕ ಮಾತನಾಡಿದರು.

65 ವರ್ಷಗಳಿಂದ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗಿದೆ. ನಾಗಮಂಡಲೋತ್ಸವದ 50ನೇ ವರ್ಷದ ಪ್ರಯುಕ್ತ ನಾಗ ದೇವರಿಗೆ ನೀಡುವ ವಿಶೇಷ ಪೂಜೆ ಅಷ್ಟಪವಿತ್ರ ನಾಗಮಂಡಲೋತ್ಸವವನ್ನು ಊರಿನವರು ಹಾಗೂ ಸಮಾಜದವರು ಸೇರಿಸಿಕೊಂಡು ಯಶಸ್ವಿಯಾಗಿ ನಡೆಸಿದ್ದಾರೆ. ಆ ಮೂಲಕ ದೇವರ ಸಂಪೂರ್ಣ ಅನುಗ್ರಹಕ್ಕೆ ಪಾಪ್ತರಾಗಿದ್ದಾರೆ. ಆನಂದ ಸಿ.ಕುಂದರ್ -ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ https://www.vijayavani.net/burden-dedication-for-bengere-naga-mandalotsava https://www.vijayavani.net/the-world-is-going-according-to-gods-will