ಮೂಡಲಗಿ: ಸಿದ್ದರಾಮ ಶಿವಯೋಗಿಗಳು 12ನೇ ಶತಮಾನದಲ್ಲಿ ಸಾಮಾಜಿಕ ಚಿಂತನೆಗಳ ಮೂಲಕ ಕಾಯಕದ ಮಹತ್ವ ಸಾರಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಚನ್ನಮ್ಮನ ಕಿತ್ತೂರು ತಾಲೂಕು ಟಕದ ಮಾಜಿ ಅಧ್ಯ ಬಸವರಾಜ ಕುಪ್ಪಸಗೌಡ್ರ ಹೇಳಿದರು.
ತಾಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಸೊನ್ನಲಗಿ ಸಿದ್ಧರಾಮ ಶಿವಯೋಗಿ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಬಸವಾದಿ ಶರಣರು ಜಗತ್ತಿಗೆ ಮೌಲಿಕ ಸಂದೇಶ ನೀಡಿದ್ದಾರೆ. ಸಿದ್ಧರಾಮರು ಕಟ್ಟಿಸಿದ ಕೆರೆಕಟ್ಟೆಗಳು ಸಾವಿರ ವರ್ಷ ಕಳೆದರೂ ಜನೋಪಯೋಗಿಯಾಗಿವೆ. ಇಂದಿನ ಯಾಂತ್ರಿಕ ಕಾಲದಲ್ಲಿ ಸಾಧು, ಸಂತರ ದರ್ಶನ, ಧಾರ್ಮಿಕ ಚಿಂತನ, ಕಥನ ಆಲಿಸುವಿಕೆ ಹಾಗೂ ಅಧ್ಯಾತ್ಮದ ಸಂಗದಿಂದ ಮನುಷ್ಯ ನೆಮ್ಮದಿ ಪಡೆಯಲು ಸಾಧ್ಯ ಎಂದರು.
ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಶರಣರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಹಿರಿಯ ನಿಲಯ ಪಾಲಕ ದುರದುಂಡೆಪ್ಪ ಗೌಡಿ ಹಾಗೂ ಕಾಶಪ್ಪ ಸಿಂಗನ್ನವರ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಪ್ರಶಸ್ತಿ ಪಡೆದ ಶಿಕ ಅಪ್ಪಾಸಾಹೇಬ ಕುರುಬರ, ಓಂಕಾರ ಕರಕುಂಬಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರೊ.ವಿ.ಕೆ.ನಾಯಿಕ ನಿರೂಪಿಸಿದರು.