ಜಿಲ್ಲೆ

ಹಿರಿಯರ ಆದರ್ಶ ಗುಣಗಳು ಸಮಾಜಕ್ಕೆ ಮಾದರಿ

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಹಿರಿಯರ ಆದರ್ಶ ಗುಣಗಳು ಸಮಾಜಕ್ಕೆ ಮಾದರಿಯಾಗಿವೆ. ದೇಶಕ್ಕೆ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಗಳು, ಸಮಾಜಮುಖಿ ವಿಚಾರಧಾರೆಗಳು, ಆದರ್ಶ ಜೀವನವನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹೇಳಿದರು.

ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿ.ಮಂಜುನಾಥ ಕಿಣಿ ರಂಗ ವೇದಿಕೆಯಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ವೈ.ಪಟ್ಟಾಭಿರಾಮ್ ಭಟ್ ಮರೂರು, ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಲಿಯೋ ಕ್ಲಬ್ ಅಧ್ಯಕ್ಷ ಸೃಜನ್ ಶೆಟ್ಟಿ, ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಬಿ.ಕಿಶನ್‌ರಾಜ್ ಶೆಟ್ಟಿ ಬೆಳ್ವೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅಣ್ಣಯ್ಯ ಶೆಟ್ಟಿ ಸ್ವಾಗತಿಸಿದರು. ಕೆ ಸಂಜೀವ ಆರ್ಡಿ ಕಾರ್ಯಕ್ರಮ ನಿರೂಪಿಸಿದರು. ವೈ.ಪಟ್ಟಾಭಿರಾಮ್ ಭಟ್ ಮರೂರು ವಂದಿಸಿದರು.