ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮದಲ್ಲಿ ಮಂಗಳವಾರ ಬೆಂಕಿ ಆಕಸ್ಮಿಕದಲ್ಲಿ ಚನ್ನಬಸವ್ವ ಫಕೀರಪ್ಪ ಬಾರ್ಕಿ ಅವರ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣ, ನಗದು, ಪೀಠೋಪಕರಣ, ದವಸ ಧಾನ್ಯ, ಪಾತ್ರೆ, ಕೃಷಿ ಸಲಕರಣೆಗಳು ಸುಟ್ಟಿವೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಗ್ನಿಶಾಮಕ ವಾಹನ ಬರುವುದು ತಡವಾಗಿದ್ದರಿಂದ ಗ್ರಾಮಸ್ಥರೇ ಬೆಂಕಿ ನಂದಿಸಿದರು.