ಜಿಲ್ಲೆ

ಪತ್ನಿ ಸೀಮಂತಕ್ಕೆ ಹೂ ತರಲು ತೆರಳಿದ್ದ ಪತಿ ಅಪಘಾತದಲ್ಲಿ ಸಾವು

ಮಾಗಡಿ. ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ಹೂ ತರಲು ಹೊರಟಿದ್ದ ಪತಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

ಮಾಗಡಿಯ ಸುಪ್ರಿಯ ಗಾರ್ಮೆಟ್ಸ್ ಮಾಲೀಕ ಪಟ್ಟಣದ ಜ್ಯೋತಿನಗರದ ನಿವಾಸಿ ಕುಮಾರ್ (42) ರಸ್ತೆ ಅಪಘಾತದಿಂದ ಮೃತಪಟ್ಟ ದುರ್ದೈವಿ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದದ ತಮ್ಮ ಪತ್ನಿಯ ಮನೆಯಲ್ಲಿ ಇಂದು (ಭಾನುವಾರ) ಸೀಮಂತ ಕಾರ್ಯಕ್ರಮ ಇತ್ತು.  ಕಾರ್ಯಕ್ರಮಕ್ಜೆ ಹೂ ತರಲು ವಿಜಯನಗರಕ್ಕೆ ತೆರಳಿ ಬೈಕ್ ನಲ್ಲಿ ಹೂ ತೆಗೆದುಕೊಂಡು ವಾಪಸ್ಸು ಬರುವ ವೇಳೆ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಜೆ ಕೋಡೋಯ್ಯಲಾಗಿದೆ. ಪತ್ನಿ, ಓರ್ವ ಪುತ್ರಿ, ಸಹೋದರರನ್ನು ಅಗಲಿದ್ದಾರೆ.