ಸಿಡಿಲಿನ ಹೊಡೆತಕ್ಕೆ ಗೋಡೆಗೆ, ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಹಾನಿಯಾಗಿರುವುದು 
ಜಿಲ್ಲೆ

ಸಿಡಿಲು ಬಡಿದು ಮನೆಗೆ ಹಾನಿ

ಇಂದಿರಾ ಎನ್ ಕೆ

ಕಡಬ: ಹಳೆನೇರಿಂಕಿ ಗ್ರಾಮದ ಕೂಡುರಸ್ತೆ ಸಲೀಂ ಎಂಬುವರ ಮನೆಗೆ ಬುಧವಾರ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲಾಘಾತಕ್ಕೆ ಮನೆಯ ಸ್ಲಾೃಬ್, ಗೋಡೆ, ವಿದ್ಯುತ್ ಸ್ವಿಚ್‌ಬೋರ್ಡ್, ವಯರಿಂಗ್, ಬಲ್ಬ್ ಇನ್ನಿತರ ಪರಿಕರಗಳಿಗೆ ಹಾಗೂ ಮನೆ ಪಕ್ಕದ ತೆಂಗಿನಮರಕ್ಕೆ ಹಾನಿಯಾಗಿದೆ. ಘಟನೆ ವೇಳೆ ಮನೆಯಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ರಾಮಕುಂಜ ಗ್ರಾಮ ಆಡಳಿತಾಧಿಕಾರಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.