ಕಲ್ಲೋಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಸಗೌಡ ಪಾಟೀಲ, ಡಾ.ಸುರೇಶ ಹನಗಂಡಿ, ಭಾರತಿ ಜೋಕಾನಟ್ಟಿ, ಮಲ್ಲಪ್ಪ ಮುರಗೋಡ ಇತರರಿದ್ದರು. 
ಜಿಲ್ಲೆ

ಸರ್ವರಿಗೂ ಸಮಾನತೆ ನೀಡಿದ ಪವಿತ್ರ ಗ್ರಂಥ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ಅದು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದು ಎಸ್‌ಆರ್‌ಇ ಸಂಸ್ಥೆಯ ಚೇರ್ಮನ್ ಬಸಗೌಡ ಪಾಟೀಲ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್ ಘಟಕ, ಬೆಳಗಾವಿ ನೆಹರು ಯುವ ಕೇಂದ್ರ ಹಾಗೂ ಜೋಕಾನಟ್ಟಿ ಸಿದ್ಧಾರೂಢ ಮಹಿಳಾ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಮಾತನಾಡಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ರಮೇಶ ಮಿರ್ಜಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿದರು. ರಾಜ್ಯಶಾಸ ವಿಭಾಗದ ಮುಖ್ಯಸ್ಥ ಮಲ್ಲಪ್ಪ ಮುರಗೋಡ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ನಿರ್ದೇಶಕ ಸಾತಪ್ಪ ಖಾನಾಪುರ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಸೇವಾ ಕಾರ್ಯಕರ್ತೆ ಭಾರತಿ ಜೋಕಾನಟ್ಟಿ, ಗ್ರಂಥಪಾಲಕ ಬಿ.ಬಿ. ವಾಲಿ, ಐಕ್ಯೂಎಸಿ ಸಂಯೋಜಕ ಡಾ.ಎಂ.ಬಿ. ಕುಲಮೂರ, ಡಾ.ಕೆ.ಎಸ್. ಪರವ್ವಗೋಳ, ಪ್ರೊ.ಡಿ.ಎಸ್. ಹುಗ್ಗಿ, ಪ್ರೊ.ವಿಲಾಸ ಕೆಳಗಡೆ ಇತರರು ಇದ್ದರು.