ಜಿಲ್ಲೆ

ವೀರಯೋಧರ ತ್ಯಾಗ ಸ್ಮರಣೀಯ

ಪ್ರಶಾಂತ ಹೂಗಾರ

ಚನ್ನಮ್ಮ ಕಿತ್ತೂರು: ಸಿಯಾಚಿನ್ ಪ್ರದೇಶದಲ್ಲಿ 1999ರಲ್ಲಿ ನಡೆದ ಯುದ್ಧದಲ್ಲಿ ಮಡಿದ ವೀರಯೋಧರ ತ್ಯಾಗ ಬಲಿದಾನ ಎಂದೆಂದಿಗೂ ಸ್ಮರಣೀಯ ಎಂದು ಪ್ರಾಚಾರ್ಯ ಡಾ.ಜಿ.ಕೆ. ಭೂಮನಗೌಡರ ಹೇಳಿದರು.

ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಡಾ. ಜಿ.ಕೆ. ಭೂಮನಗೌಡರ ಮಾತನಾಡಿದರು. ಪ್ರೊ. ಜಿ.ಎಸ್. ಪ್ರಭಯ್ಯನವರಮಠ, ಡಾ. ಕೆ.ಆರ್. ಮೆಳವಂಕಿ, ಪ್ರೊ. ಎಂ.ಜಿ. ಹಿರೇಮಠ, ಪ್ರೊ. ರವಿ ಹವಿನಾಳೆ ಇದ್ದಾರೆ.

ಸ್ಥಳೀಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಯೋಧರ ಪರಿಶ್ರಮದಿಂದ ಪ್ರತಿದಿನ ಸುಖವಾಗಿ ನಿದ್ರಿಸಲು ಸಾಧ್ಯವಾಗಿದೆ ಎಂದರು.

ಅತಿಥಿಗಳಾಗಿ ಪ್ರೊ. ಜಿ.ಎಸ್.ಪ್ರಭಯ್ಯನವರಮಠ, ಎನ್‌ಸಿಸಿ ಅಕಾರಿ ಪ್ರೊ. ಎಂ.ಜಿ. ಹಿರೇಮಠ ಮಾತನಾಡಿ, ದೇಶ ಕಾಯುವ ಸೆನಿಕರಿಗೆ ಗೌರವ ಕೊಡಬೇಕು ಎಂದರು.

ವೀರ ಯೋಧರ ಸ್ಮರಣಾರ್ಥವಾಗಿ ವೌನ ಆಚರಿಸಿ ಗೌರವ ಸಲ್ಲಿಸಲಾಯಿತು. ಐ.ಕ್ಯೂ.ಎಸಿ ಚೇರ್ಮನ್ ಪ್ರೊ. ರವಿ ಹವಿನಾಳೆ, ಎನ್.ಎನ್. ಹೊಸಮನಿ, ಪ್ರೊ. ಸಂಗೀತಾ ತೋಲಗಿ, ಪ್ರೊ. ಪ್ರಿಯಂಕಾ ಧಾಮೋಣೆ, ಡಾ. ಬಿ ಜಿ. ನಂದನ ಇದ್ದರು. ಪ್ರೊ. ಎಚ್.ಕೆ. ನಾಗರಾಜ ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಡಾ. ಕೆ. ಆರ್. ಮೆಳವಂಕಿ ಮಾತನಾಡಿದರು, . ಪ್ರೊ. ಆನಂದ ಕರೆಪ್ಪನವರ ಸ್ವಾಗತಿಸಿದರು. ಪ್ರೊ. ಸತೀಶ ಶಹಾಪೂರ ನಿರೂಪಿಸಿದರು. ರೇಖಾ ಗಾಣಿಗೇರ ವಂದಿಸಿದರು.