ಜಿಲ್ಲೆ

ಯುವಶಕ್ತಿಯ ಆರೋಗ್ಯವೇ ದೇಶದ ಆಸ್ತಿ

ಗೋಕಾಕ: ಯುವಜನರೇ ದೇಶದ ಶಕ್ತಿಯಾಗಿದ್ದು, ಆರೋಗ್ಯ ಸಂರಕ್ಷಣೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮೈಸೂರು ಅರಸು ಮನೆತನದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹೇಳಿದರು.

ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ ಭಾನುವಾರ ಆಯೋಜಿಸಿದ್ದ ಗೋಕಾಕ ಹಿಲ್ ಹ್ಾ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಸ್ಥಳೀಯ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯ ಹಮ್ಮಿಕೊಂಡು ದೇಶದ ಜನರ ಪ್ರೀತಿಗಳಿಸಿದೆ. ಮ್ಯಾರ್‌ಥಾನ್‌ನಂತಹ ಕಾರ್ಯಕ್ರಮ ಮೂಲಕ ಆರೋಗ್ಯ ಹಾಗೂ ರಕ್ತದಾನದ ಜಾಗೃತಿ ಮೂಡಿಸುತ್ತಿದ್ದು, ಉತ್ತಮ ಕೆಲಸಗಳ ಮೂಲಕ ಮಾದರಿಯಾಗಿದೆ. ಇಂತಹ ಸಂಸ್ಥೆಯಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯಲೆಂದು ಹಾರೈಸಿದರು.

ಮ್ಯಾರಥಾನ್‌ನಲ್ಲಿ 21 ಕಿ.ಮೀ., 10 ಕಿ.ಮೀ., 3 ಕಿ.ಮೀ. ವಿಭಾಗಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ಆರು ಲಕ್ಷ ರೂ. ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಯಿತು. ಭಾಗವಹಿಸಿದ್ದ ಎಲ್ಲರಿಗೂ ಟಿ-ಶರ್ಟ್ ವಿತರಿಸಲಾಯಿತು.

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಡಸಿದ್ಧೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ, ಶಾಸಕರಾದ ರಮೇಶ ಜಾರಕಿಹೊಳಿ, ಎಂಎಲ್‌ಸಿ ಹನುಮಂತ ನಿರಾಣಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಅರುಣ ಭಂಡಾರೆ, ಗೋಕಾಕ ರೋಟರಿ ಅಧ್ಯಕ್ಷ ಗಿರೀಶ ಝಂವರ, ಕಾರ್ಯದರ್ಶಿ ಬಸವರಾಜ ಹುಳ್ಳೇರ, ಸೋಮಶೇಖರ ಮಗದುಮ, ಮಲ್ಲಿಕಾರ್ಜುನ ಕಲ್ಲೋಳಿ, ಜಯಾನಂದ ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟಿ, ಮಹಾಂತೇಶ ತಾಂವಶಿ, ವಿಶ್ವನಾಥ ಕಡಕೋಳ ಹಾಗೂ ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಯ ಸದಸ್ಯರು ಇದ್ದರು.