ಜಿಲ್ಲೆ

ಮಾದಕ ವಸ್ತು ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಹಾಳು

ಕಲಘಟಗಿ: ಯುವಶಕ್ತಿ ಕಾರಣಾಂತರದಿಂದ ಮಾದಕ ವಸ್ತುಗಳ ಸೇವನೆ ದುಶ್ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಇಲ್ಲಿನ ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್. ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳು ಜೀವಕ್ಕೆ ಹಾನಿ ಉಂಟು ಮಾಡುವ ಜತೆಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದು ಅಪರಾಧವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತಾನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮನುಷ್ಯ ಸದಾ ಎಚ್ಚರಿಕೆ ಹೊಂದಿರಬೇಕು ಎಂದರು.

ಕಿರಿಯ ದಿವಾಣಿ ನ್ಯಾಯಾಧೀಶರಾದ ಗಣೇಶ ಎನ್., ಸಹಾಯಕ ಸರ್ಕಾರಿ ಅಭಿಯೋಜಕರಾದ ಶಶಿಕಲಾ ಶಿವಣ್ಣವರ, ವಕೀಲರ ಸಂಘ ಅಧ್ಯಕ್ಷ ಎಂ.ಎಸ್. ಧನಿಗೊಂಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಗುಡಿಹಾಳ, ವಕೀಲರಾದ ಶಿವನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಂಜುನಾಥ ಕಲಗೇರಿ, ಮುಖ್ಯೋಪಾಧ್ಯಾಯ ಕುಮಾರ.ಕೆ.ಎಫ್., ಪಿಡಿಒ ಸಿ.ಎಸ್. ಉಳ್ಳಾಗಡ್ಡಿ, ಸುಭಾಸ ವಾಡಕರ, ನಾರಾಯಣ ಹವಳಗುಂಡಿ, ನಾರಾಯಣ ಸಂಗಮೇಶ್ವರ, ಮಹಮ್ಮದ್‌ಅಲಿ ಸುಂಕದ, ನಿಂಗಪ್ಪ ಮುದಿಗೌಡರ, ಕಲ್ಲಪ್ಪ ಮಾದರ, ಪ್ರವೀಣ ಲಕ್ಕಣ್ಣವರ, ಡಿ.ಡಿ. ಅಲ್ಲಿಬಾಯಿ ಇದ್ದರು.