ಅಥಣಿ ಪಟ್ಟಣದ ಯಶಸ್ವಿನಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಉಚಿತ ಕಿವಿ ತಪಾಸಣೆೆ ಜರುಗಿತು. ಅರುಣ ಸೌದಾಗರ, ವಿನಯ ಬಾಳಿಕಾಯಿ, ಅರವಿಂದ ಕಡಬಡಿ, ಆನಂದ ಕುಲಕರ್ಣಿ ಇದ್ದರು. 
ಜಿಲ್ಲೆ

ಕಿವಿಗಳ ಆರೋಗ್ಯ ಬಹಳ ಮುಖ್ಯ

ಅಥಣಿ: ದೇಹದ ಅಂಗಾಂಗಳಲ್ಲಿ ಕಿವಿ ಪಾತ್ರ ಪ್ರಮುಖವಾಗಿದೆ. ಅದರ ಸುರಕ್ಷತೆ ಕುರಿತು ಎಲ್ಲರೂ ಅರಿಯಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಪಟ್ಟಣದ ಯಶಸ್ವಿನಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಅಥಣಿ ಮತ್ತು ರೋಟರಿ ಕ್ಲಬ್ ವೇಣುಗ್ರಾಂ ಬೆಳಗಾವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಿವಿ ತಪಾಸನೆ ಶಿಬಿರದಲ್ಲಿ ಮಾತನಾಡಿ, ಸಮಾಜ ಮುಖಿ ಸೇವೆಯಲ್ಲಿ ರೋಟರಿ ಕ್ಲಬ್ ನಿರಂತರ ಶ್ರಮಿಸುತ್ತಿದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿ, ತಾಲೂಕಿನ ಜನರು ಕಿವಿ ತಪಾಸನೆ ಶಿಬಿರದ ಲಾಭ ಪಡೆದುಕೊಂಡಿದ್ದಾರೆ ಎಂದರು.

ವಿನಯಕುಮಾರ ಬಾಳಿಕಾಯಿ, ಅರವಿಂದ ಕಡಬಡಿ, ಮಹಾದೇವ ಗಿಡ್ಡಳಿ, ಕಿಶೋರ ಜಗದಾಳೆ ಶಿಬಿರ ನಡೆಸಿಕೊಟ್ಟರು. ರೋಟರಿ ಪದಾಧಿಕಾರಿಗಳಾದ ಸಚಿನ ದೇಸಾಯಿ, ಶೇಖರ ಕೋಲಾರ, ಡಾ.ಆನಂದ ಕುಲಕರ್ಣಿ, ಅರುಣ ಯಲಗುದ್ರಿ, ಚಿದಾನಂದ ಮೇತ್ರಿ, ಅನಿಲ ದೇಶಪಾಂಡೆ, ತೃಪ್ತಿ ಕುಲಕರ್ಣಿ, ಸಂತೋಷ ಬೊಮ್ಮಣವರ, ಸುರೇಶ ಬಳ್ಳೊಳ್ಳಿ, ಅಮೃತ ಕುಲಕರ್ಣಿ ಇತರರು ಇದ್ದರು.