ಕಾರಟಗಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಕೆ. ಪರಸಪ್ಪ ನಾಯಕ, ವಕೀಲರಾದ ಮಹೇಶ್ ಸ್ವಾಮಿ ಕುಲಕರ್ಣಿ, ಶ್ರೀಕಂಠಯ್ಯಸ್ವಾಮಿ, ರಾಮಚಂದ್ರ ದೇವರಗುಡಿ, ಬಸವರಾಜ ಆರಾಪುರ, ನಾಗರಾಜ ಬೂದಿ, ಮಂಜುನಾಥ ಪುರ್ತಗೇರಿ, ಅಂಬಣ್ಣ ನಾಯಕ ಇತರರಿದ್ದರು. 
ಜಿಲ್ಲೆ

ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ

ರುದ್ರಪ್ಪ ವಾಲಿ

ಕಾರಟಗಿ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಹಾಗೂ ಹಿರಿಯ ವಕೀಲ ಸದಾಶಿವ ರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಸೋಮವಾರ ಮನವಿ ಸಲ್ಲಿಸಿದರು.

ಸದಾಶಿವ ರೆಡ್ಡಿ ಅವರ ಕಚೇರಿಯಲ್ಲಿ ಅಪರಿಚಿತರು ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ತಾಲೂಕು ಸಂಘದಿಂದ ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಪದೇ ಪದೆ ಇಂಥ ಘಟನೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ಹೀಗಾಗಿ ಇಂಥ ಘಟನೆಗಳು ಮರುಕಳಿಸಬಾರದು.

ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾಯ್ದೆ ಜಾರಿಗೊಳಿಸಬೇಕು. ಹಲ್ಲೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಕೀಲರಾದ ಕೇಶವ ನಾಯಕ, ವಿಜಯಕುಮಾರ ನವಲಿ, ತ್ರಿಲೋಚನ ಬೂದಗುಂಪಾ, ಬಸನಗೌಡ ಯರಡೋಣಾ, ಅಮರೇಗೌಡ, ಸುಮಾ ಹಿರೇಮಠ, ಕವಿತಾ, ವಿಜಯ ಪಾಟೀಲ್ ನವಲಿ, ಪಂಪಾಪತಿ ಈಳಿಗನೂರು, ಮಾರುತಿ ಹುಳ್ಳಿಹಾಳ, ಪೃಥ್ವಿರಾಜ, ರಾಚಪ್ಪ, ಶರಣಪ್ಪ ರಾಂಪುರ, ಬಸವರಾಜ ತಳವಾರ ಜೂರಟಗಿ, ತಿಪ್ಪನಗೌಡ ಸಿದ್ದಾಪುರ ಸೇರಿ ಇತರರಿದ್ದರು.