ಜಿಲ್ಲೆ

ರಂಗಭೂಮಿಯ ಹಿರಿಮೆ ಬಹುದೊಡ್ಡದು

ಸಿದ್ದಾಪುರ: ರಂಗಭೂಮಿಯ ಹಿರಿಮೆ ಬಹುದೊಡ್ಡದು. ರಂಗಸಂಸ್ಥೆಯನ್ನು ಸಂಘಟಿಸಿ, ಅದರ ಮೂಲಕ ನಾಟಕ ಪ್ರದರ್ಶಿಸುವದು ಸುಲಭದ ಕಾರ್ಯವಲ್ಲ ಎಂದು ಸಾಂಸ್ಕೃತಿಕ ಚಿಂತಕ ಗೋಪಾಲ ಹೆಗಡೆ ಹುಲಿಮನೆ ಹೇಳಿದರು.

ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಾಲಯ ಆಡಳಿತ ಮಂಡಳಿ, ದುರ್ಗಾ ವಿನಾಯಕ ಕೃಷಿಕ ಯುವಕ ಸಂಘ, ದುರ್ಗಾವಿನಾಯಕ ಯಕ್ಷಮಿತ್ರ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಿದ್ದ ರಂಗ ಸೌಗಂಧ 36 ಅಲ್ಲ 63 ಎನ್ನುವ ಹವ್ಯಕ ನಗೆ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ರಂಗಭೂಮಿಯಲ್ಲಿ ದಂತ ಕಥೆಯಾಗಿರುವವರು ದಿ.ಹುಲಿಮನೆ ಸೀತಾರಾಮ ಶಾಸ್ತ್ರಿಗಳು. ಅವರ ಕುಟುಂಬದ ಗಣಪತಿ ಹೆಗಡೆ ರಂಗ ಸೌಗಂಧ ರಂಗಸಂಸ್ಥೆಯ ಮೂಲಕ ರಂಗಭೂಮಿಯನ್ನು ಸಕ್ರಿಯಗೊಳಿಸುತ್ತಿರುವದು ಸಂತಸದ ಸಂಗತಿ ಎಂದರು.

ಅಧ್ಯಕ್ಷತೆವಹಿಸಿದ್ದ ದುರ್ಗಾವಿನಾಯಕ ದೇವಾಲಯದ ಮೋಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೆಸರ ಮಾತನಾಡಿದರು.

ಹಿರಿಯ ಕೃಷಿಕ, ಸಾಂಸ್ಕೃತಿಕ ಪೋ›ತ್ಸಾಹಕ ಸುಬ್ರಾಯ ಹೆಗಡೆ ಮತ್ತೀಗಾರ ಉಪಸ್ಥಿತರಿದ್ದರು.

ರಂಗ ಸೌಗಂಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಹೆಗಡೆ ಪೇಟೆಸರ ಸ್ವಾಗತಿಸಿ ವಂದಿಸಿದರು.

ನಂತರ ರಂಗ ಸೌಗಂಧ ತಂಡದವರಿಂದ 36 ಅಲ್ಲ 63 ನಾಟಕ ಪ್ರದರ್ಶನಗೊಂಡು ಕಲಾಸಕ್ತರನ್ನು ರಂಜಿಸಿತು.