ಬಾಳೆಹೊನ್ನೂರಿನ ಭೈರವಿ ಒಕ್ಕಲಿಗರ ಮಹಿಳಾ ವೇದಿಕೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಎಚ್.ವಿ.ಶಾರದಾ ಅವರನ್ನು ಸನ್ಮಾನಿಸಲಾಯಿತು. ಸಿ.ಟಿ.ರೇವತಿ, ಶಾಂತಾ, ಕೆ.ಎನ್.ಮರಿಗೌಡ, ಶಕುಂತಲಾ, ಸಾಂಚಿತಾ, ಪ್ರೀತಿ, ಜ್ಯೋತಿ ಇದ್ದರು. 
ಜಿಲ್ಲೆ

ಮಹಿಳೆಯರಲ್ಲಿ ಅಡಗಿದೆ ಜಗತ್ತಿನ ಶ್ರೇಷ್ಠ ಸಂಪತ್ತು

ಬಾಳೆಹೊನ್ನೂರು: ಶಾಂತಿ ಸ್ವರೂಪಳಾದ ಮಹಿಳೆಯರಲ್ಲಿ ಜಗತ್ತಿನ ಶ್ರೇಷ್ಠ ಸಂಪತ್ತು ಅಡಗಿದೆ ಎಂದು ರಾಜ್ಯ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಾ ಸುರೇಂದ್ರ ಹೇಳಿದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ಭೈರವಿ ಒಕ್ಕಲಿಗರ ಮಹಿಳಾ ಸಂಘ ಮಂಗಳವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಮಹಿಳೆಯಾಗಿ ಹುಟ್ಟುವುದೇ ಪುಣ್ಯ. ಹಿಂದೆ ಸಂಸಾರದಲ್ಲಿ ತಾಯಿ, ಪತ್ನಿ, ಸಹೋದರಿಯಾಗಿದ್ದ ಮಹಿಳೆ ಇಂದು ಹೊರ ಪ್ರಪಂಚಕ್ಕೆ ಬಂದು ಸ್ವತಂತ್ರೃಳಾಗಿದ್ದಾಳೆ. ಇಂದು ಪ್ರತಿ ಮನೆಯಲ್ಲಿಯೂ ಸಂಘಟಕ ಮಹಿಳೆಯರಿದ್ದು, ಓಬವ್ವನ ರೀತಿ ಹೋರಾಟ ಮಾಡುವ ಶಕ್ತಿ ಎಲ್ಲರಲ್ಲೂ ಇದೆ ಎಂದರು.
ಸಮಾಜದಲ್ಲಿ ಮಹಿಳೆಯರು ಮುನ್ನಡೆಯುವಾಗ ಕಾಲೆಳೆಯುವವರು, ನೋವು ನೀಡುವರು ಬರುತ್ತಾರೆ. ಆದರೆ ಇವುಗಳಿಗೆ ಚಿಂತಿಸದೆ ಮಹಿಳೆಯರು ಕ್ರಿಯಾತ್ಮಕವಾಗಿ ಯೋಚಿಸಬೇಕು. ಸಮಾಜದಲ್ಲಿ ನೊಂದವರ, ಕಷ್ಟದಲ್ಲಿರುವವರ ಪರ ಸತ್ಯ, ನ್ಯಾಯಕ್ಕಾಗಿ ಹೋರಾಡಿದಾಗ ಮಾತ್ರ ನಿಜವಾದ ಮಹಿಳಾ ದಿನಾಚರಣೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್.ಮರಿಗೌಡ, ಸಂಘದ ಉಪಾಧ್ಯಕ್ಷೆ ಸಾಂಚಿತಾ, ಕಾರ್ಯದರ್ಶಿ ಪ್ರೀತಿ, ಖಜಾಂಚಿ ಜ್ಯೋತಿ, ಸುಷ್ಮಾ, ಸಹನಾ, ಸುಚೇತಾ, ಪ್ರಶಾಂತಿ, ಗಾಯತ್ರಿ, ರೇಖಾ, ಆಶಾ ಮತ್ತಿತರರು ಹಾಜರಿದ್ದರು.