ಅಳವಂಡಿ: ಲೋಕ ಕಲ್ಯಾಣಾರ್ಥ ಹಾಗೂ ಮನುಕುಲದ ಉದ್ಧಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಪಾವನಗೊಳಿಸಿದ್ದಾರೆ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು. ಗ್ರಾಪಂ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಮುಖರಾದ ಅನ್ವರ್ ಗಡಾದ, ವಿಶ್ವನಾಥ ದೋತರಗಾವಿ, ದೇವೇಂದ್ರರಡ್ಡಿ, ವೆಂಕಟೇಶ ಇತರರಿದ್ದರು.