ಹೊಸಕೋಟೆಯ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್​ ಬಹಾದೂರ್​ ಶಾಸಿ ಭಾವಚಿತ್ರಕ್ಕೆ ಶಾಸಕ ಶರತ್​ ಬಚ್ಚೇಗೌಡ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್​ ಸೋಮಶೇಖರ್​, ನಗರಸಭಾಯುಕ್ತ ನೀಲಾ ಲೋಚನಪ್ರಭು, ತಾಪಂ ಇಒ ಮುನಿಯಪ್ಪ, ಬಿಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ ಇದ್ದರು. 
ಜಿಲ್ಲೆ

ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಕೊಟ್ಟ ಮಹನೀಯ

ಹೊಸಕೋಟೆ : ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ಹಾಗೂ ಲಾಲ್​ಬಹಾದೂರ್​ ಶಾಸಿ ಅವರ ಜೈ ಕಿಸಾನ್​ ಜೈ ಜವಾನ್​ ಘೋಷವಾಕ್ಯಗಳು ದೇಶದ ಸಂಪತ್ತಾಗಿವೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ದಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಅನುಭವಿಸಿದ ವರ್ಣ ಭೇದವು ಚಳವಳಿಯನ್ನೇ ರೂಪಿಸಿತು, ನಂತರ ಭಾರತಕ್ಕೆ ವಾಪಸ್​ ಆದ ಸಂದರ್ಭದಲ್ಲಿ ದೇಶದಲ್ಲಿನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಲಿಟ್ಟ ಅವರು ದೇಶದ 550 ಪ್ರಾಂತ್ಯಗಳಿಗೆ ತೆರಳಿ ಅಲ್ಲಿಯ ಜನರ ಕಷ್ಟಗಳನ್ನು ಆಲಿಸಿದರು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ದೇಶಕ್ಕೆ ಸ್ವಾತಂತ್ರ್ಯ ಚಳವಳಿ ಮುಂದುವರಿಸಲು ಹಿಂಸೆ ಮಾರ್ಗ ಬೇಡ ಎಂಬ ನಿರ್ಧಾರಕ್ಕೆ ಬಂದ ಅವರು ಅಹಿಂಸಾ ಮಾರ್ಗದಲ್ಲಿ ದೇಶದ ಸ್ವಾತಂತ್ರ್ಯ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದರು.

ತಹಸೀಲ್ದಾರ್​ ಸೋಮಶೇಖರ್​ ಮಾತನಾಡಿ, ಗಾಂಧೀಜಿ ಕೇವಲ ವ್ಯಕ್ತಿಯಲ್ಲ, ಮಾನವೀಯತೆಯ ಪ್ರತಿಕವಾಗಿದ್ದರು, ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಪಡೆಯಬಹುದೆಂದು ತೋರಿಸಿಕೊಟ್ಟ ಮಹಾನ್​ ವ್ಯಕ್ತಿ ಎಂದರು. ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್​ ಎಂ ಸುಬ್ಬರಾಜ್​, ಜಡಿಗೇನಹಳ್ಳಿ ಎಸ್​ ಎಪ್​ ಸಿ ಎಸ್​ ಅಧ್ಯಕ್ಷ ಕೆ ಎಸ್​ ಸುರೇಶ್​, ಮಾಕನಹಳ್ಳಿ ಹಾಲು ಉತ್ಪಾದನಾ ಸಹಕಾರ ಸಂದ ಅಧಕ್ಷ ರಮೇಶ್​ ಇದ್ದರು.

ಪ್ರಜಾಸೌಧಕ್ಕೆ ಶ್ರೀ ಚಾಲನೆ : ತಾಲೂಕು ಕಚೇರಿ ಹೆಸರಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 16 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು, 16 ರಿಂದ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಪ್ರಜಾ ಸೌಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ದೊರೆಯಲಿದೆ, ಪ್ರತಿಷ್ಟಾಪನೆಯಾಗಿರುವ ಮಹಾತ್ಮಗಾಂಧಿ ಪುತ್ಥಳಿಯನ್ನು ಪ್ರಜಾ ಸೌಧ ಪೂರ್ಣಗೊಂಡ ನಂತರ ಉದ್ಘಾಟಿಸಲಾಗುವುದು ಎಂದು ಶಾಸಕ ಶರತ್​ಬಚ್ಚೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಅನಾಥಪ್ರೆ ಕಾಡುತ್ತಿದ್ದು, ನೂರಾರು ಜನ ಸೇರಬೇಕಿತ್ತು, ಸಂಟಕರು ರಾಜಕೀಯ ಮುಖಂಡರು ಸೇರಿ ಕಾರ್ಯಕ್ರಮ ಆಚರಣೆ ಮಾಡಬೇಕಿತ್ತು. ಆದರೆ ಕೇವಲ ಕೆಲ ಅಧಿಕಾರಿಗಳು ಹಾಗೂ ಕೆಲ ಜನಪ್ರತಿನಿಧಿಗಳು ಹಾಜರಾಗಿರುವುದು ಅನಾಥಪ್ರೆ ಕಾಡಲು ಕಾರಣವಾಗಿದೆ. | ಶರತ್​ ಬಚ್ಚೇಗೌಡ ಶಾಸಕ