mantralaya 
ಜಿಲ್ಲೆ

ಅದ್ದೂರಿಯಾಗಿ ಜರುಗಿದ ಶ್ರೀ ಸುಯತೀಂದ್ರ ತೀರ್ಥರ ಮಧ್ಯಾರಾಧನೆ

ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಯತೀಂದ್ರ ತೀರ್ಥರ ೧೨ ನೇ ಮಧ್ಯಾರಾಧನೆಯು ಬುಧವಾರ ಅದ್ದೂರಿಯಾಗಿ ಜರುಗಿತು.

ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಸುಯತೀಂದ್ರ ತೀರ್ಥರ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಮಂಗಳಾರತಿ ನೇರವೇರಿಸಿದರು.

ನಂತರ ಶ್ರೀಮಠದ ಪ್ರಾರಂಗಣದಲ್ಲಿ ಶ್ರೀ ಸುಯತೀಂದ್ರ ತೀರ್ಥ ಸ್ವಾಮೀಜಿಯವರ ರಥೋತ್ಸವವು ಶಾಸೊöÃಕ್ತವಾಗಿನಡೆಯಲು ಚಾಲನೆ ನೀಡಿದರು. ವಿವಿಧ ಪ್ರದೇಶಗಳಿಂದ ಆಗಮಿಸಿದ ಭಕ್ತರಿಂದ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆರಾಧನೆ ನಿಮಿತ್ತ ಮತ್ತೂರು ಮಠದ ಶ್ರೀಭೋದಾನಂದ ಸರಸ್ವತಿ ಸ್ವಾಮೀಜಿಯವರು ಆಗಮಿಸಿ ಮಧ್ಯಾರಾಧನೆಯ ಸಾನಿಧ್ಯವಹಿಸಿದರು.