ಜಿಲ್ಲೆ

ವಿಜೃಂಭಣೆಯ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ

ಉತ್ತರ ಕನ್ನಡ ಡೆಸ್ಕ್

ಹಳಿಯಾಳ: ಪಟ್ಟಣದ ಮಹಾಗಣಪತಿ ದೇವಸ್ಥಾನದಲ್ಲಿ 34ನೇ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದಿಂದ ಸೋಮವಾರ ಮತ್ತು ಮಂಗಳವಾರ ಎರಡು ದಿನ ಮಹಾಗಣಪತಿ ದೇವಸ್ಥಾನದಲ್ಲಿ ವರ್ಧಂತಿ ಮಹೋತ್ಸವ, ಹೋಮ, ಹವನ ಹಾಗೂ ಬೆಳ್ಳಿ ರಥೋತ್ಸವ ನಡೆಯಿತು.

ದೇವಸ್ಥಾನದಲ್ಲಿ ನವಗ್ರಹ ಹೋಮ, ತತ್ವ ಕಲಾವೃದ್ಧಿ ಹವನ, ಗಣಹೋಮ, ಸಹಸ್ರನಾಮ ಹೋಮ, ಮೃತ್ಯುಂಜಯ ಹೋಮ ಮತ್ತು ಬ್ರಹ್ಮಣಸ್ಪತಿ ಹೋಮ, ಅಥರ್ವಶಿರ್ಷ ಹೋಮ, ರಥಾಂಗ ಹೋಮ, ದಿಕ್ಪಾಲಕ ಬಲಿ, ಪೂರ್ಣಾಹುತಿ, ಮಹಾಗಣಪತಿ ಮತ್ತು ಪರಿವಾರ ದೇವತೆಗೆ ಬಲಿ, ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ ಹಾಗೂ ಸಂಜೆ ಬೆಳ್ಳಿ ರಥೋತ್ಸವ ನಡೆಯಿತು.

ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಅವರ ಕುಟುಂಬ, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ, ಎಸ್.ಎಲ್. ಘೊಟ್ನೇಕರ ದೇವಸ್ಥಾನ ಆಡಳಿತ ಕಮಿಟಿಯ ಸದಸ್ಯರು ಇದ್ದರು.