oplus_32 
ಜಿಲ್ಲೆ

ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿ

ಬೈಲಹೊಂಗಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನ್ನದಾತರ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ರೈತರು ಸಿಡಿದೆದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ನೇಗಿಲ ಯೋಗಿ ರೈತ ಸೇವಾ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ ಹೇಳಿದರು.

ಪಟ್ಟಣದ ರೈತ ಭವನದಲ್ಲಿ ನೇಗಿಲ ಯೋಗಿ ರೈತ ಸೇವಾ ಸಂ ಸೋಮವಾರ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಬಂಡಾಯ ನಡೆದು 45 ವರ್ಷ ಗತಿಸಿದರೂ, ಈವರೆಗೆ ರೈತರ ಬೇಡಿಕೆ ಈಡೇರದೇ ಬದುಕು ಹಸನಾಗುತ್ತಿಲ್ಲ. ಪರಿಸರ ಸೇರಿ ಇತರ ನೆಪವೊಡ್ಡದೆ ಕೇಂದ್ರ ಸರ್ಕಾರ ಶ್ರೀವೇ ಮಹದಾಯಿ, ಕಳಸಾ&ಬಂಡೂರಿ ನಾಲಾ ಜೋಡಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ವಿತರಿಸಿದ ಸೋಯಾಬೀನ್​ ಬೀಜ ಕಳಪೆಯಾಗಿದ್ದು, ರೈತರಿಗೆ ಹಾನಿಯಾಗಿದೆ. ಹೀಗಾಗಿ, ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ೂಷಣೆ ಮಾಡಬೇಕೆಂದು ಆಗ್ರಹಿಸಿದರು.

ತಾಲೂಕಾಧ್ಯ ಸೋಮಲಿಂಗಪ್ಪ ಮೆಳ್ಳಿಕೇರಿ ಮಾತನಾಡಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ನೀರಾವರಿ ಸೌಲಭ್ಯ ಒದಗಿಸಲು ಸವದತ್ತಿ ಬಳಿ ನವಿಲುತೀರ್ಥದಲ್ಲಿ ಮಲಪ್ರಭಾ ನದಿಗೆ ಅಣೆಕಟ್ಟು ನಿರ್ಮಾಣವಾಯಿತು. ಪ್ರತಿಯಾಗಿ ರೆತರ ಮೇಲೆ ಸರ್ಕಾರ ವಿಧಿಸಿದ ಬೆರ್ಮೆಂಟ್​ ಲೆವಿ (ಅಭಿವೃದ್ಧಿ ಕರ) ವಿರೋಧಿಸಿ ಹೋರಾಟ ಆರಂಭವಾಯಿತು ಎಂದು ತಿಳಿಸಿದರು.

ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಾಗಪ್ಪ ಬೋಳನ್ನವರ, ಜಗದೀಶ ಬೋಳನ್ನವರ, ಅನಿಲ ಗೀರನ್ನವರ, ಸೋಮು ಮೂಲಿಮನಿ, ಮಡಿವಾಳಪ್ಪ ಚಿಕ್ಕೋಪ್ಪ, ಅದೃಶ್ಯಪ್ಪ ಹುಚ್ಚನ್ನವರ, ಮಡಿವಾಳಪ್ಪ ಬುಡಶೆಟ್ಟಿ, ಶಂಕರಗೌಡ ಪಾಟೀಲ, ಅಜ್ಜು ಹುರುಳಿ, ಪ್ರಶಾಂತ ಮಾಕಿ, ಬಸವರಾಜ ಜಂಬಗಿ, ಮಹೇಶ ಬೋಳನ್ನವರ ಇತರರಿದ್ದರು.