oplus_2 
ಜಿಲ್ಲೆ

ಕಾರ್ಮಿಕರ ಸ್ವಾಸ್ಥ್ಯ ರಕ್ಷಣೆಗೆ ಸರ್ಕಾರ ಬದ್ಧ

ರಾಮದುರ್ಗ: ದುಡಿಯುವ ಶ್ರಮಿಕ ವರ್ಗದ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕಾರ್ಮಿಕರು ಇರುವ ಸ್ಥಳದಲ್ಲೇ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಂಚಾರ ಆರೋಗ್ಯ ಸೇವೆ ಆರಂಭಿಸಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಶುಕ್ರವಾರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇತೃತ್ವದಲ್ಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ಸೇವೆ ನೀಡುವ ಆರೋಗ್ಯ ತಪಾಸಣೆ ಸಂಚಾರ ಘಟಕ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕ ನಿರೀಕ್ಷಕ ನಾಗರಾಜ ಮಧೂರ ಮಾತನಾಡಿ, ಸರ್ಕಾರ ಬೆಳಗಾವಿ ಜಿಲ್ಲಾದ್ಯಂತ ಒಟ್ಟು 6 ಸಂಚಾರ ಆರೋಗ್ಯ ಘಟಕ ವಾಹನ ಒದಗಿಸಿದೆ ಎಂದು ತಿಳಿಸಿದರು. ಸಂಚಾರ ಆರೋಗ್ಯ ಘಟಕದ ಡಾ. ಹನಮಗೌಡ ಮಾತನಾಡಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಗಣೇಶ ಖಾನಪೇಟೆ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರಿದ್ದರು.