ರಬಕವಿ ಪಟ್ಟಣಶೆಟ್ಟಿ ಲೇಔಟ್​ದಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಮೆಟ್ರಿಕ್​ ನಂತರದ ಬಾಲಕಿಯರ ವಸತಿನಿಲಯ ನಿರ್ಮಾಣ ಕಾಮಗಾರಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಶ್ರೀಶೈಲ ಬೀಳಗಿ, ಗೌರಿ ಮಿಳ್ಳಿ, ಈಶ್ವರ ನಾಗರಾಳ, ಮಹಾದೇವ ದೂಪದಾಳ, ಮಹಾದೇವ ಕೋಟ್ಯಾಳ ಇದ್ದರು. 
ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ಸರ್ಕಾರದ ಬಳಿ ದುಡ್ಡಿಲ್ಲ

ಗಿರೀಶ ಸಗರ

ರಬಕವಿ/ಬನಹಟ್ಟಿ: ಬಾಗಲಕೋಟೆ ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ನೇರ ಅನುದಾನ ನೀಡಿಕೆ ಶೀರ್ಷಿಕೆಯಡಿ ರಬಕವಿಯ ಪಟ್ಟಣಶೆಟ್ಟಿ ಲೇಔಟ್​ 12&32 ಮೀ. ವಿಸ್ತೀರ್ಣದ ಜಾಗದಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಮೆಟ್ರಿಕ್​ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಗುರುವಾರ ಶಾಸಕ ಸಿದ್ದು ಸವದಿ ಪೂಜೆ ಸಲ್ಲಿಸಿ ಶಂಕುಸ್ಥಾಪನೆ ನೆರವೇರಿಸಿದರು.

ಒಂದು ಅಡುಗೆ ಕೋಣೆ, ಶೌಚಗೃಹ ಮತ್ತು 21 ಕೊಠಡಿಗಳು ಹಾಗೂ ಅತ್ಯಾಧುನಿಕ ಶೈಲಿಯಲ್ಲಿ ವಸತಿ ನಿಲಯ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಸಿಡಿಮಿಡಿಗೊಂಡ ಶಾಸಕ ಸವದಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪುರಸಭೆ ಮತ್ತು ನಗರಸಭೆಯಿಂದಲೂ ಯಾವುದೇ ಜನಹಿತ ಕಾಮಗಾರಿಗಳಾಗದೆ ಜನ ಬೇಸತ್ತಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಶಾಸಕ ಸವದಿ, ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರ ನಡೆಸಲು, ನೌಕರರಿಗೆ ವೇತನ ನೀಡಲು ಹರಸಾಹಸ ಪಡುತ್ತಿದೆ.

ಮತೇತ್ರದಲ್ಲಿ ಹೊಸ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಹಳೆಯ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೂ ಹಣ ಬಿಡುಗಡೆಯಾಗುತ್ತ್ತಿಲ್ಲ. ಹೀಗಾಗಿ ಎಲ್ಲ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು.

ಸರ್ಕಾರದಿಂದ 1 ಕೋಟಿ ರೂ. ಒಳಗಿನ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಿನ ಮೌಲ್ಯದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಅನುದಾನ ಮೊತ್ತ ಪಾವತಿಯಾಗದ್ದರಿಂದಾಗಿ ೇತ್ರದಲ್ಲಿನ ಎಲ್ಲ ಹಳೇ ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆಂದರು.

ರಬಕವಿ&ರಾಮಪುರ ಮಾರ್ಗದ 1.4 ಕಿ.ಮೀ. ರಸ್ತೆ ಕಾಮಗಾರಿ 15 ತಿಂಗಳ ಹಿಂದೆ ನೀವೇ ಚಾಲನೆ ನೀಡಿದ್ದೀರಿ? ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಡೆಸಿದ್ದರೂ ಪತ್ರಿಕೆಗಳು ಕಳಪೆ ಕಾಮಗಾರಿ ಎಂದು ಅಪಪ್ರಚಾರ ಮಾಡುತ್ತಿದ್ದು, ಉನ್ನತ ಹಂತದ ಪರಿಶೀಲನೆ ಬಳಿಕ ಕಾಮಗಾರಿ ನಡೆಸುವಂತೆ ಮೇಲಧಿಕಾರಿಗಳು ತಿಳಿಸಿದ್ದರಿಂದ ಸ್ಥಗಿತಗೊಳಿಸಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್​.ಆರ್​. ಬಂಡಿವಡ್ಡರ ಸ್ಪಷ್ಟನೆ ನೀಡಿ, ರಸ್ತೆ ಕಾಮಗಾರಿಗೆ ರಾಮಪುರದ ವ್ಯಕ್ತಿಯೊಬ್ಬ ಅಡ್ಡಿಪಡಿಸಿದ್ದು, ನಗರ ಭೂಮಾಪನ ಇಲಾಖೆ ಅಧಿಕಾರಿಯಿಂದ ಸರ್ವೇ ನಡೆಸಿ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು.

ನಗರ ಟಕದ ಬಿಜೆಪಿ ಅಧ್ಯ ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಮಹಾದೇವ ಕೋಟ್ಯಾಳ, ಮಹಾದೇವ ಧೂಪದಾಳ, ಈಶ್ವರ ನಾಗರಾಳ, ಮಹಾದೇವ ಪಾಲಭಾಂವಿ, ಸುರೇಶ ಅಕ್ಕಿವಾಟ, ಮಂಜುನಾಥ ಆಲಗೂರ, ಪರಪ್ಪ ಪೂಜಾರಿ, ನಗರಸಭೆ ಸದಸ್ಯರಾದ ಯುನೂಸ್​ ಚೌಗುಲೆ, ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಪ್ರಕಾಶ ಸಿಂಗನ್​ ಇತರರಿದ್ದರು.