ಜಿಲ್ಲೆ

ಸರ್ಕಾರದಲ್ಲಿ ಹಣ ಇದೆ, ಅಗತ್ಯ ಯೋಜನೆ ಜಾರಿ ಮಾಡುತ್ತೇವೆ, ಮಂಕಾಳ ವೈದ್ಯ

Uttara Kannada - Subash Hegde

ಕಾರವಾರ: ಸರ್ಕಾರದಲ್ಲಿ ಹಣ ಇದೆ. ವಿರೋಧ ಪಕ್ಷಗಳು, ಜನರು ಹೇಳುವ ಪರಿಸ್ಥಿತಿ ಇಲ್ಲ. ಅಗತ್ಯ ಸಂದರ್ಭಗಳಲ್ಲಿ ಅಗತ್ಯ ಯೋಜನೆ ಜಾರಿ ಮಾಡಲಿದ್ದೇವೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.

ಜಿಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರ ಮಾಡಿದ ಸಾಲ ತೀರಿಸುತ್ತಿದ್ದೇವೆ. ಹೊಸ ಕೆಲಸವನ್ನೂ ಪ್ರಾರಂಭಿಸುತ್ತಿದ್ದೇವೆ ಎಂದರು.

ಇಷ್ಟ ಇಲ್ಲದಿದ್ದರೆ ಹೋಗಿಬಿಡಿ:

ಜನ ನಮಗೂ, ನಿಮಗೂ ಕೆಲಸ ಮಾಡಲು ಅವಕಾಶ ನೀಡಿದ್ದಾರೆ.‌ಉತ್ತರ ಕನ್ನಡ ಜಿಲ್ಲೆ ಬುದ್ದಿವಂತರ ಜಿಲ್ಲೆಯಾಗಿದೆ. ತಪ್ಪಾದಲ್ಲಿ ಜನ ತಕ್ಷಣ ಕಂಡು ಹಿಡಿದು ಹೇಳುತ್ತಾರೆ.

ಬಡವರಿಗೆ, ಸಾಮಾನ್ಯ ಜನರಿಗೆ ತೊಂದರೆ, ಆಗದಂತೆ ನೋಡಿಕೊಳ್ಳಿ. ಜಿಲ್ಲೆಯಲ್ಲಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೇಳಿಬಿಡಿ, ನಿಮಗೆ ಬೇಕಾದ ಜಿಲ್ಲೆಗೆ ಕಳಿಸಿಕೊಡುತ್ತೇವೆ. ಶಿಕ್ಷಣಕ್ಕೆ ನಮ್ಮ‌ ಮೊದಲ ಆದ್ಯತೆಯಾಗಿದೆ. ಶಿಕ್ಷಣ, ದೇವಸ್ಥಾನ, ಮಠದಲ್ಲಿ ರಾಜಕೀಯ ಮಾಡಲು ಹೋಗಬೇಡಿ.